ಬೆಂಗಳೂರು:ಒಕ್ಕಲಿಗ ಸಮುದಾಯದ ಗುತ್ತಿಗೆದಾರ ಮತ್ತವನ ಕುಟುಂಬದ ಬಗ್ಗೆ ಕೀಳಾಗಿ ಮಾತನಾಡಿರುವ ಮುನಿರತ್ನ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಕಾಂಗ್ರೆಸ್ ನ ಒಕ್ಕಲಿಗ ಶಾಸಕರ ನಿಯೋಗ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿತು.
ಭೇಟಿಯ ವೇಳೆ, ಮುನಿರತ್ನ ಆಡಿಯೋದಲ್ಲಿ ಒಕ್ಕಲಿಗ ಸಮುದಾಯದ ಗುತ್ತಿಗೆದಾರನಿಗೆ ಅವಾಚ್ಯ ಶಬ್ದ ಬಳಸಿ ನಿಂದಿಸುವುದಲ್ಲದೇ, ಸಮುದಾಯದ ಹೆಸರಿಡಿದು ಬೈಯ್ದಿದ್ದಾರೆ. ಜತೆಗೆ, ಗುತ್ತಿಗೆದಾರನ ತಾಯಿ ಮತ್ತು ಪತ್ನಿಯ ಬಗ್ಗೆ ಹಗುರವಾಗಿ ಮಾತನ್ನಾಡಿದ್ದಾರೆ. ಇದಕ್ಕೆಲ್ಲ ಸರಿಯಾದ ಶಿಕ್ಷೆಯಾಗಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
ನಿಯೋಗದಲ್ಲಿ ಒಕ್ಕಲಿಗ ಸಮುದಾಯದ ಸಚಿವ ಚಲುವರಾಯಸ್ವಾಮಿ, ಡಾ.ಎಂ.ಸಿ.ಸುಧಾಕರ್, ಶಾಸಕರಾದ ಎಚ್.ಸಿ. ಬಾಲಕೃಷ್ಣ, ಡಾ.ರಂಗನಾಥ್, ಶರತ್ ಬಚ್ಚೇಗೌಡ, ಪರಿಷತ್ ಸದಸ್ಯರಾದ ಪುಟ್ಟಣ್ಣ, ರವಿ ಮುಂತಾದವರಿದ್ದರು.

