ಬೆಂಗಳೂರು: ವ್ಯಕ್ತಿಯೊಬ್ಬನ ಬಟ್ಟೆ ಬಿಚ್ಚಿಸಿ ಓಡಿಸಿದ್ದ ರೌಡಿಶೀಟರ್ ಪವನ್ ಬಂಧಿಸಲು ತೆರಳಿದ್ದ ಪೊಲೀಸರು, ಆತನ ಕಾಲಿಗೆ ಗುಂಡು ಹಾರಿಸಿ, ನಂತರ ಬಂಧಿಸಿರುವ ಘಟನೆ ನಡೆದಿದೆ.
ಘಟನೆಯ ನಂತರ ರೌಡಿಶೀಟರ್ ಪವನ್ ಆಲಿಯಾಸ್ ಕಡುಬು ತುಮಕೂರಿನಲ್ಲಿ ತಲೆ ಮರೆಸಿಕೊಂಡಿದ್ದ. ಆತನ ವಿರುದ್ಧ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಗೋವಿಂದರಾಜನಗರ ಇನ್ಸ್ಪೆಕ್ಟರ್ ಸುಬ್ರಮಣ್ಯ ಮತ್ತು ಸಿಬ್ಬಂದಿ ಆತನನ್ನು ಬಂಧಿಸಿ ಕರೆತರುತಿತ್ತು.
ಈ ವೇಳೆ ಆತ ತಪ್ಪಿಸಿಕೊಂಡು ಕಾನ್ಸ್ ಟೇಬಲ್ ವೆಂಕಟೇಶ್ ಮೇಲೆ ಹಲ್ಲೆಗೆ ಮುಂದಾಗಿದ್ದ. ಹೀಗಾಗಿ, ಇನ್ಸ್ಪೆಕ್ಟರ್ ಸುಬ್ರಮಣ್ಯ ಆತನ ಕಾಲಿಗೆ ಗುಂಡು ಹಾರಿಸಿ ಆತನನ್ನು ಬಂಧಿಸಿದ್ದಾರೆ.

