ಗುಂಡ್ಲುಪೇಟೆ; ಕಲ್ಲು ಗಣಗಾರಿಕೆ ಟಿಪ್ಪರ್ ಹರಿದು ಕೇರಳ ಮೂಲದ ಒಂದೇ ಕುಟುಂದ ಮೂವರು ದುರ್ಮರಣ ಹೊಂದಿರುವ ಘಟನೆ ಗುಂಡ್ಲುಪೇಟೆ ಹೊರವಲಯದಲ್ಲಿ ನಡೆದಿದೆ.
ಟಿಪ್ಪರ್ ಚಾಲಕನ ಅಜಾಗರೂಕತೆಯಿಂದ ಬೈಕ್ ಸವಾರರ ಮೇಲೆ ಟಿಪ್ಪರ್ ಹರಿದಿದೆ. ಬೈಕ್ ನಲ್ಲಿದ್ದ ಕೇರಳ ಮೂಲದ ದಿನೇಶ್ ಮತ್ತು ಆತನ ಪತ್ನಿ ಅಂಜು ಹಾಗೂ ಪುತ್ರ ಇಶಾನ್ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಟಿಪ್ಪರ್ ಚಾಲಕ ಅಪಘಾತ ನಡೆಸಿದ ನಂತರ ಸುಮಾರು ಒಂದು ಕಿ.ಮೀ.ವರೆಗೆ ಬೈಕ್ ಅನ್ನು ಎಳೆದುಹೋಗಿದ್ದು, ಚಕ್ರದಡಿ ಸಿಲುಕಿದ ಮೂವರು ಮೃತಪಟ್ಟಿದ್ದಾರೆ. ಟಿಪ್ಪರ್ ಚಾಲಕನ ವರ್ತನೆಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಥಳಕ್ಕೆ ಗುಂಡ್ಲುಪೇಟೆ ಪೊಲೀಸರು ಆಗಮಿಸಿದ್ದು, ಟಿಪ್ಪರ್ ವಶಕ್ಕೆ ಪಡೆದಿದ್ದು, ಚಾಲಕನ ಬಂಧನಕ್ಕೆ ಬಲೆ ಬೀಸಿದ್ದಾರೆ. ಗುಂಡ್ಲುಪೇಟೆ ಆಸ್ಪತ್ರೆಯಲ್ಲಿ ಶವಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ.