ಅಪರಾಧ ಸುದ್ದಿ

ಕಲ್ಲಿದ್ದಲು ಕಂಪನಿಗೆ 2 ಕೋಟಿ ರು. ವಂಚನೆ ಮಾಡಿದಾತನ ಬಂಧಿಸಿದ ಪೊಲೀಸರು

Share It

ಬಳ್ಳಾರಿ: ಕಲ್ಲಿದ್ದಲು ಸಪ್ಲೆ ಮಾಡುವ ಕಂಪನಿಗೆ ನಕಲಿ ಇ- ಮೇಲ್ ಮೂಲಕ 2 ಕೋಟಿ 11 ಲಕ್ಷ ವಂಚಿಸಿದ್ದಾತನನ್ನು ಬಳ್ಳಾರಿ ಪೊಲೀಸರು ಮಧ್ಯಪ್ರದೇಶದಲ್ಲಿ ಹಣ ಸಮೇತವಾಗಿ
ಬಂಧಿಸಿದ್ದಾರೆ.

ಅಜಯ್ ಕುಮಾರ್ ಜೈಸ್ವಾಲ್ ಬಂಧಿತ ಆರೋಪಿ. ಮಧ್ಯಪ್ರದೇಶದ ಅಗರ್ವಾಲ್ ಕೋಲ್ ಕಾರ್ಪೋರೇಷನ್ ಕಂಪನಿ ಕಲ್ಲಿದ್ದಲು ಖರೀದಿಗೆ ಬಳ್ಳಾರಿಯ ಹಿಂದುಸ್ತಾನ್ ಮೆಟಲ್ ಪ್ರೈವೇಟ್ ಲಿಮಿಟೆಟ್ ಕಂಪನಿಗೆ ಹಣ ವರ್ಗಾವಣೆ ಮಾಡಿತ್ತು. ಹಣ ವರ್ಗಾವಣೆ ಬಗ್ಗೆ ಮಾಹಿತಿ ಪಡೆದಿದ್ದ ಅಜಯ್ ಕುಮಾರ್ ಜೈಸ್ವಾಲ್, ಅಗರ್ವಾಲ್ ಕಂಪನಿಯ ನಕಲಿ ಇ-ಮೇಲೆ ಕ್ರಿಯೇಟ್ ಮಾಡಿ, ಕಂಪನಿಯ ಬ್ಯಾಂಕ್ ಅಕೌಂಟ್ ನಂಬರ್ ಚೇಂಜ್ ಆಗಿದೆ ಅಂತಾ ಹಿಂದುಸ್ತಾನ್ ಕಂಪನಿಗೆ ಮೇಲ್ ಕಳಿಸಿದ್ದಾನೆ.

ಫೇಕ್ ಮೇಲ್ ಅನ್ನು ನಂಬಿದ ಹಿಂದುಸ್ತಾನ್ ಕಂಪನಿ ಅಜಯ್ ಕುಮಾರ್ ಜೈಸ್ವಾಲ್ ಕಳಿಸಿದ್ದ ಅಕೌಂಟ್ ನಂಬರ್ ಗೆ ಹಣ ವರ್ಗಾವಣೆ ಮಾಡಿದ್ದಾರೆ.
ಖಾತೆಗೆ ಬಂದ 2 ಕೋಟಿ 11 ಲಕ್ಷ ಹಣವನ್ನ ಇತರೆ 18 ಖಾತೆಗಳಿಗೆ ಹಾಕಿ ಆರೋಪಿ ಹಣವನ್ನು ಡ್ರಾ ಮಾಡಿಕೊಂಡಿದ್ದ. ಹಿಂದುಸ್ತಾನ್ ಕಂಪನಿ, ಅರ್ಗವಾಲ್ ಕಂಪನಿಗೆ ಕಲ್ಲಿದ್ದಲು ಕಳಿಸಿ ಎಂದಾಗ ಹಣ ವಾಪಸ್ ಹಾಕಿದ್ದೇವೆ ಎಂದಿದ್ದಾರೆ. ಸೆ.3ರಂದು ಹಣ ವರ್ಗಾವಣೆ ಮಾಡಲಾಗಿದೆ ಎಂದು ಹಿಂದುಸ್ತಾನ್ ಕಂಪನಿ ತಿಳಿಸಿದಾಗ ವಂಚನೆ ಬೆಳಕಿಗೆ ಬಂದಿದೆ.

ಈ ಕುರಿತು ಬಳ್ಳಾರಿ ಸೈಬರ್ ಠಾಣೆಗೆ ಹಿಂದುಸ್ತಾನ್ ಕಂಪನಿ ದೂರು ದಾಖಲಿಸಿತ್ತು. ಬಳ್ಳಾರಿ ಎಸ್ಪಿ ಶೊಭಾ ರಾಣಿ ಅವರಿಂದ ಪ್ರಕರಣ ಭೇದಿಸಲು ಡಿ.ಎಸ್.ಪಿ ಸಂತೋಷ್ ನೇತೃತ್ವದ ತಂಡ ರಚನೆ ಮಾಡಲಾಗಿದ್ದು ಕೆವೈಸಿ ಹಾಗೂ ಹಣ ವರ್ಗಾವಣೆಯಾದ ಖಾತೆ ಜಾಡು ಹಿಡಿದು ಮಧ್ಯಪ್ರದೇಶದ ಸಿದ್ದಿ ಜಿಲ್ಲೆಯಲ್ಲಿ ಅಡಗಿದ್ದ ಆರೋಪಿಯನ್ನು ಬಂಧಿಸಲಾಗಿದೆ.


Share It

You cannot copy content of this page