ಬೆಂಗಳೂರು: ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಸೂಕ್ಷ್ಮ ಪ್ರದೇಶ ಘೋಷಿಸುವ ನಿಟ್ಟಿನಲ್ಲಿ ಕಸ್ತೂರಿ ರಂಗನ್ ವರದಿಗೆ ಜನಪ್ರತಿನಿಧಿಗಳ ಸಭೆಯಲ್ಲಿ ವಿರೋಧ ವ್ಯಕ್ತವಾಯಿತು ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.
ಈಗಾಗಲೇ ಸಂರಕ್ಷಿತ ಅರಣ್ಯ ಪ್ರದೇಶ ಇರುವ ಕಡೆಗೆ ಕಸ್ತೂರಿ ರಂಗನ್ ವರದಿ ಅನುಷ್ಠಾನಕ್ಕೆ ನಮ್ಮ ವಿರೋಧವಿಲ್ಲ. ಉಳಿದಂತೆ ಜನವಸತಿ ಪ್ರದೇಶದ ಮೂಲಸೌಕರ್ಯ ಕ್ಕೆ ಅಡ್ಡಿಯಾಗಬಾರದು ಎಂದು ಸಲಹೆ ಕೇಲೀಬಂದಿದೆ.
ಪಶ್ವಿಮಘಟ್ಟಗಳು ಇಡೀ ದೇಶದ ಸಂಪತ್ತು. ಹೀಗಾಗಿ, ಅವುಗಳ ಸಂರಕ್ಷಣೆ ಇಡೀ ದೇಶದ ಹೊಣೆಯಾಗಿದೆ. ಕೇಂದ್ರ ಸರಕಾರ ಸೂಕ್ಷ್ಮ ಪ್ರದೇಶ ಮಾಡುವುದರಿಂದ ಆಗುವ ಅನಾಹುತ ಗಮನದಲ್ಲಿರಿಸಿ, 1620 ಹಳ್ಳಿಗಳ ಪುನರ್ವಸತಿಗೆ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ತಿಳಿಸಿದರು.
ಕೇಂದ್ರಕ್ಕೆ ನಿಯೋಗ ಕೊಂಡೊಯ್ದು ಚರ್ಚೆ ನಡೆಸಿ, ಕೇಂದ್ರಕ್ಕೆ ಮನವರಿಕೆ ಮಾಡಿಕೊಡಲು ತೀರ್ಮಾನಿಸಿದೆ. ಕಸ್ತೂರಿ ರಂಗನ್ ವರದಿಯಲ್ಲಿ 20,600 ಚ ಕಿ.ಮೀ ಸರ್ವೆ ಮಾಡಲಾಗಿದೆ. ಈಗ ಮರು ಸರ್ವೆ ಮಾಡಿದರೆ ಉತ್ತಮ ಎಂಬ ಅಭಿಪ್ರಾಯ ವ್ಯಕ್ತವಾಗಿದೆ ಎಂದರು.

