ಕೆಪಿಎಸ್ಸಿ ಯು ಲೋಕೋಪಯೋಗಿ ಇಲಾಖೆಯಲ್ಲಿ ಖಾಲಿ ಇರುವ ಎಇಇ ಹುದ್ದೆಗಳಿಗೆ ಅರ್ಜಿಯನ್ನು ಕರೆದಿದ್ದು ಒಟ್ಟು 42 ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅದರಲ್ಲಿ ಒಟ್ಟು ಹುದ್ದೆಗಳ ಪೈಕಿ ಹೈದರಬಾದ್ ಕರ್ನಾಟಕದ 12 ಎಇಇ ಹುದ್ದೆಗಳು ಸೇರಿವೆ. ಈ ಹುದ್ದೆಗಳು ಗ್ರೇಡ್ 1 ಹುದ್ದೆಗಳಾಗಿವೆ. ಅರ್ಜಿ ಸಲ್ಲಿಸುವ ವಿಧಾನವನ್ನು ಈ ಕೆಳಗಿನಂತೆ ನೋಡೋಣ ಬನ್ನಿ.
ನೇಮಕಾತಿ ಪ್ರಾಧಿಕಾರ – ಕರ್ನಾಟಕ ಲೋಕ ಸೇವಾ ಆಯೋಗ.
ವೇತನ- Rs.83,700- 1,55,200
ಹುದ್ದೆಯ ಹೆಸರು – ಸಹಾಯಕ ಕಾರ್ಯಪಾಲಕ ಇಂಜಿನಿಯರ್ (ಗ್ರೇಡ್ 1)
ಈ ಹುದ್ದೆಗೆ ಪರೀಕ್ಷೆಯನ್ನು ನಡೆಸುವ ಮೂಲಕ ಆಯ್ಕೆಯಾದ ಅಭ್ಯರ್ಥಿಯನ್ನು ನೇರವಾಗಿ ನೇಮಕ ಮಾಡಲಾಗುವು ಎಂದು ಇಲಾಖೆಯು ತಿಳಿಸಿದೆ.
ವಿದ್ಯಾರ್ಹತೆ
ಸಿವಿಲ್ ಇಂಜಿನಿಯರಿಂಗ್, ಕಂಸ್ಟ್ರಕ್ಷನ್ ಟೆಕ್ನಾಲಜಿ ಮತ್ತು ಮ್ಯಾನೇಜ್ಮೆಂಟ್, ಬಿಲ್ಡಿಂಗ್ ಅಂಡ್ ಕಂಸ್ಟ್ರಕ್ಷನ್ ಟೆಕ್ನಾಲಜಿ, ಸಿವಿಲ್ ಇಂಜಿನಿಯರಿಂಗ್ ಅಂಡ್ ಪ್ಲಾನಿಂಗ್ ,ಸಿವಿಲ್ ಟೆಕ್ನಾಲಜಿ, ಕಂಸ್ಟ್ರಕ್ಷನ್ ಟೆಕ್ನಾಲಜಿ, ಕಂಸ್ಟ್ರಕ್ಷನ್ ಇಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್, ಜಿಯೋಮೆಕಾನಿಕ್ಸ್ ಮತ್ತು ಸ್ಟ್ರಕ್ಚರ್, ಸ್ಟ್ರಕ್ಚರಲ್ ಅಂಡ್ ಫೌಂಡೇಷನ್ ಇಂಜಿನಿಯರಿಂಗ್, ಸ್ಟ್ರಕ್ಚರಲ್ ಇಂಜಿನಿಯರಿಂಗ್ ಮತ್ತು ಕಂಸ್ಟ್ರಕ್ಷನ್ ಪದವಿಯನ್ನು ಪಡೆದಿರಬೇಕು. ಇಂಜಿನಿಯರ್ಸ್ ಇನ್‌ಸ್ಟ್ರಿಟ್ಯೂಷನ್‌ನ ಅಸೋಸಿಯೇಟ್ ಮೆಂಬರ್‌ಶಿಪ್ ಪರೀಕ್ಷೆಯ (ಸಿವಿಲ್ ಅಥವಾ ಕಂಸ್ಟ್ರಕ್ಷನ್ ಟೆಕ್ನಾಲಜಿ ಮತ್ತು ಮ್ಯಾನೇಜ್ಮೆಂಟ್ ಇಂಜಿನಿಯರಿಂಗ್‌ನಲ್ಲಿ) ಪಾರ್ಟ್ ಎ, ಬಿ ಯನ್ನು ಉತ್ತೀರ್ಣ ಮಾಡಿರಬೇಕು. ಇವುಗಳಲ್ಲಿ ಯಾವುದೇ ಅರ್ಹತೆ ಇದ್ದರೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ವಯೋಮಿತಿ
ಕನಿಷ್ಠ 21 ವರ್ಷ ಗರಿಷ್ಠ 35 ವರ್ಷ ಅದರಲ್ಲೂ 2ಎ, 2ಬಿ, 3ಎ ಮತ್ತು 3ಬಿ ಅಭ್ಯರ್ಥಿಗಳಿಗೆ ಗರಿಷ್ಠ 38 ವರ್ಷ ಹಾಗೂ SC,ST ಮತ್ತು ಪ್ರವರ್ಗ-1 ಗರಿಷ್ಠ 40 ವರ್ಷ.
ಅರ್ಜಿ ಆರಂಭದ ದಿನಾಂಕ 03 -10-2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 04 -11-2024
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ https://kpsconline.karnataka.gov.in
ಅರ್ಜಿ ಶುಲ್ಕ ಸಾಮಾನ್ಯ ಅಭ್ಯರ್ಥಿಗೆ 600 ಮತ್ತು ಹಿಂದುಳಿದ ವರ್ಗಕ್ಕೆ 300. ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ , ಮಾಜಿ ಸೈನಿಕ ಹಾಗೂ ವಿಕಲಚೇನರಿಗೆ ಉಚಿತ .