ಅಪರಾಧ ಸುದ್ದಿ

ಕೆಲಸ ಕೊಡಿಸುವುದಾಗಿ 23 ಲಕ್ಷ ರೂ ಪಡೆದು ವಂಚನೆ: ಹಲಸೂರು ಗೇಟ್ ಠಾಣೆಯಲ್ಲಿ ಪ್ರಕರಣ ದಾಖಲು

Share It

ಬೆಂಗಳೂರು: ಬೆಸ್ಕಾಂನಲ್ಲಿ ಕೆಲಸ ಕೊಡಿಸುವುದಾಗಿ ವಂಚಿಸಿದ್ದವರ ವಿರುದ್ಧ ಹಲಸೂರು ಗೇಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಲಿಖಿತ್ ಗೌಡ ಎಂಬುವರಿಗೆ ಕೆಲಸ ಕೊಡಿಸುವುದಾಗಿ ವಿಘ್ನೇಶ್ ಹೆಗ್ಡೆ (44), ಪ್ರವೀಣ್ (30), ವೆಂಕಟೇಶ್ (44), ಶಿವಾನಂದ್ (63), ಶ್ರೀನಿವಾಸ್ (29), ಮತ್ತು ರಾಜಾ (42) ಎಂಬುವರು ಹಣ ಪಡೆದು ನಕಲಿ ನೇಮಕಾತಿ ಆದೇಶ ನೀಡಿದ್ದರು.

ಲಿಖಿತ್ ಅವರು 2021 ರಲ್ಲಿ ವಿಘ್ನೇಶ್ ಹೆಗ್ಡೆ ಅವರೊಂದಿಗೆ ಸ್ನೇಹ ಬೆಳೆಸಿದರು, ಅವರು ಬೆಸ್ಕಾಂ, ಕೆಪಿಟಿಸಿಎಲ್ ಮತ್ತು ಇತರ ವಿವಿಧ ಸರ್ಕಾರಿ ವಲಯಗಳಲ್ಲಿ ಕೆಲಸ ಮಾಡಲು ಸಹಾಯ ಮಾಡುವುದಾಗಿ ಭರವಸೆ ನೀಡಿದ್ದರು. ತನ್ನ ಸ್ನೇಹಿತರು ಬೆಸ್ಕಾಂನಲ್ಲಿ ಕೆಲಸ ಮಾಡುತ್ತಿದ್ದಾರೆ ಅವರಿಗೆ 23 ಲಕ್ಷ ಹಣ ನೀಡುವಂತೆ ಲಿಖಿತ್ ಗೆ ತಿಳಿಸಿದ್ದಾನೆ.
ಆದರೆ ಆರೋಪಿಗಳು 2023 ರಲ್ಲಿ ತನಗೆ ನಕಲಿ ಉದ್ಯೋಗ ಪತ್ರ ನೀಡಿದ್ದಾರೆ.

ಹಣವನ್ನು ಹಿಂದಿರುಗಿಸಲು ಕೇಳಿದಾಗ ಆರೋಪಿಗಳು ಬೆದರಿಕೆ ಹಾಕಿದ್ದಾರೆ. ನಂತರ ಲಿಖಿತ್ ಹೈಗ್ರೌಂಡ್ಸ್ ಪೊಲೀಸರಿಗೆ ದೂರು ನೀಡಲು ಹೋದಾಗ ಆತನನ್ನು ಬೆದರಿಸಿ ದೂರು ನೀಡದಂತೆ ತಡೆದಿದ್ದರು. ಇತ್ತೀಚೆಗೆ ಹಣ ಕೇಳಿದಾಗ ಮತ್ತೆ ಬೆದರಿಕೆ ಹಾಕಿದ್ದರಿಂದ ಲಿಖಿತ್ ದೂರು ದಾಖಲಿಸಿದ್ದಾರೆ.


Share It

You cannot copy content of this page