ಸುದ್ದಿ

ಶ್ರೀರಾಮಸೇನೆ ಮುಖಂಡನಿಗೆ ಶಹಾಪುರ ತಾಲೂಕು ಪ್ರವೇಶಕ್ಕೆ ನಿರ್ಬಂಧ

Share It


ಯಾದಗಿರಿ : ಗಣಪತಿ ಮೆರವಣಿಗೆ ವೇಳೆ ಜಿ ಶಾಂತಿ ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಹಿಂದೂಪರ ಭಾಷಣಕಾರ ಶ್ರೀರಾಮಸೇನೆ ಸಿದ್ಧಲಿಂಗಯ್ಯಸ್ವಾಮಿ( ಆಂದೋಲ ಶ್ರೀ)ಅವರಿಗೆ ಶಹಾಪುರ ತಾಲೂಕು ಪ್ರವೇಶಕ್ಕೆ ಜಿಲ್ಲಾಡಳಿತ ನಿರ್ಬಂಧ ವಿಧಿಸಿದೆ.

ಸೆ. 20 ರಂದು ರಾತ್ರಿ 12 ಗಂಟೆಯಿಂದ ಸೆ. 22ರ ಮಧ್ಯಾಹ್ನ 2 ಗಂಟೆಯ ವರೆಗೆ ಸಿದ್ದಲಿಂಗಯ್ಯ (ಆಂದೋಲ ಶ್ರೀ) ಅವರಿಗೆ ಶಹಾಪುರ ತಾಲೂಕು ಪ್ರವೇಶ ಮಾಡದಂತೆ ಸಿ.ಆರ್.ಪಿ.ಸಿ ಕಾಯ್ದೆ ಸೆಕ್ಷನ್ 133, 143, 144ಎ ರನ್ವಯ ನಿರ್ಬಂಧ ಜಾರಿಗೊಳಿಸಿ ಡಿಸಿ ಸುಶೀಲಾ ಬಿ ಅವರು ಆದೇಶಿಸಿದ್ದಾರೆ.


Share It

You cannot copy content of this page