ಅಪರಾಧ ಸುದ್ದಿ

ಟಿಕೆಟ್ ರಹಿತ ಪ್ರಯಾಣ ಮಾಡುವವರೇ ಎಚ್ಚರ; ಆಗಸ್ಟ್‌ನಲ್ಲಿ 3,692 ದಂಡ ರಹಿತ ಪ್ರಕರಣ ಪತ್ತೆ ಹಚ್ಚಿದ KSRTC

Share It

ಬೆಂಗಳೂರು:ಟಿಕೆಟ್ ಪಡೆಯದೆ ಕೆಎಸ್ಆರ್ ಟಿಸಿ ಬಸ್ ಗಳಲ್ಲಿ ಪ್ರಯಾಣ ಮಾಡಿದ 3,692 ಪ್ರಕರಣಗಳನ್ನು ಪತ್ತೆಹಚ್ಚಿರುವ ಕೆಎಸ್ಆರ್ ಟಿಸಿ ತನಿಖಾ ತಂಡಗಳು ಪತ್ತೆಹಚ್ಚಿವೆ.

ಆಗಸ್ಟ್ ತಿಂಗಳಲ್ಲಿ ನಿಗಮದ ಸುಮಾರು 43,781 ವಾಹನಗಳನ್ನು ಪರಿಶೀಲನೆ ನಡೆಸಿ, 3692 ಪ್ರಕರಣಗಳನ್ನು ದಾಖಲಿಸಲಾಗಿದೆ. 3851 ಟಿಕೆಟ್ ರಹಿತ ಪ್ರಯಾಣಿಕರಿಂದ 6,21,383 ರು. ದಂಡ ವಸೂಲಿ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಆ ಮೂಲಕ ನಿಗಮಕ್ಕೆ ಸೋರಿಕೆಯಾಗುತ್ತಿದ್ದ 80,059 ರು. ಗಳನ್ನು ಪತ್ತೆ ಹಚ್ಚಿ ತಪ್ಪಿತಸ್ಥರ ವಿರುದ್ದ ಸೂಕ್ತ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಹೀಗಾಗಿ, ಪ್ರಯಾಣಿಕರು ಟಿಕೆಟ್ ರಹಿತ ಪ್ರಯಾಣ ಮಾಡದಂತೆ ಎಚ್ಚರಿಕೆಯನ್ನು ನೀಡಲಾಗಿದೆ.


Share It

You cannot copy content of this page