ಉಪಯುಕ್ತ ಸುದ್ದಿ

ಸೂರಿಲ್ಲದವರಿಗೆ ‘ವಸತಿ ಭಾಗ್ಯ’: ರಾಜ್ಯ ಸರ್ಕಾರದ ಹೊಸ ಯೋಜನೆ !

Share It

ರಾಜ್ಯ ಸರ್ಕಾರ ಈಗಾಗಲೇ ವಿವಿಧ ಭಾಗ್ಯಗಳನ್ನು ನೀಡಿದೆ. ಸದ್ಯ ವಸತಿ ಸಮಸ್ಯೆಯಿಂದ ಸಮಸ್ಯೆಗಳನ್ನು ಅನುಭವಿಸುತ್ತಿದ್ದವರಿಗೆ ವಸತಿ ಸಚಿವ ಜಮೀರ್ ಅಹಮದ್ ವಸತಿ ಭಾಗ್ಯ ಯೋಜನೆಯಡಿ ಮುಸಲ್ಮಾನ ಕುಟುಂಬಗಳಿಗೆ ವಸತಿಯನ್ನು ಒದಗಿಸುವ ಯೋಜನೆಯನ್ನು ಜಾರಿಗೊಳಿಸುವುದಾಗಿ ಹೇಳಿದ್ದಾರೆ.

ಮುಸಲ್ಮಾನ ಬಡ ಕುಟುಂಬಗಳಿಗೆ ಕಡಿಮೆ ಬಾಡಿಗೆಗೆ ಮನೆಯನ್ನು ನೀಡುವ ಮೂಲಕ ಸಮುದಾಯವನ್ನು ಅಭಿವೃದ್ಧಿ ಮಾಡಬಹುದಾಗಿದೆ. ಇದರ ಜೊತೆ ಜೊತೆಗೆ ಮಸೀದಿಗಳಲ್ಲಿ ಕೆಲಸ ಮಾಡುವ ಮೌಜನ್ ಮತ್ತು ಇಮಾಮ್ ಗಳಿಗೂ ಬಾಡಿಗೆ ಮನೆಗಳನ್ನು ನಿರ್ಮಿಸುವ ಮೂಲಕ ಸಹಕಾರ ನೀಡಲಾಗುವುದು ಎಂದು ಕಲಬುರ್ಗಿ ಯಲ್ಲಿ ನಡೆದ ಸಭೆಯಲ್ಲಿ ತಿಳಿಸಿದ್ದಾರೆ.

ಸಮುದಾಯಗಳ ಆರೋಗ್ಯವನ್ನು ಕಾಪಾಡುವ ದೃಷ್ಟಿಯಿಂದ ಪ್ರತಿ ಜಿಲ್ಲೆಗೆ ಒಂದು ಆಂಬುಲೆನ್ಸ್ ಅನ್ನು ನೀಡುವುದಾಗಿ ಹೇಳಿದ್ದಾರೆ. ಇದರೊಂದಿಗೆ ತಜ್ಞರ ಸಲಹೆಯ ಮೇರೆಗೆ ಪ್ರೀಜರ್ ಗಳನ್ನು ಸ್ಥಾಪಿಸಲಾಗುವುದು ಎಂದು ಹೇಳಿದರು.

ಈ ಯೋಜನೆಯು ಮುಸಲ್ಮಾನರಿಗೆ ಮಾತ್ರವಲ್ಲ. ಇತರ ಬಡವರಿಗೂ ಸೌಲಭ್ಯ ದೊರೆಯಲಿದೆ ಎಂದು ಜಮೀರ್ ಹೇಳಿದ್ದಾರೆ.


Share It

You cannot copy content of this page