ಬೆಂಗಳೂರು: ರಸ್ತೆಯಲ್ಲಿ ಸೈಡ್ ಕೊಡಲಿಲ್ಲ ಎಂಬ ಕಾರಣಕ್ಕೆ ಕಾರು ಚಾಲಕ ಮತ್ತು ಬಿಎಂಟಿಸಿ ಬಸ್ ಚಾಲಕನ ನಡುವೆ ಮಾರಾಮಾರಿ ನಡೆದಿದೆ.
ನಗರದ ಬಾಗ್ ಮಾನೆ ಟೆಕ್ ಪಾರ್ಕ್ ಬಳಿ ಸುರಂಜನ್ ದಾಸ್ ರಸ್ತೆಯಲ್ಲಿ ಘಟನೆ ನಡೆದಿದೆ. ನಡು ರಸ್ತೆಯಲ್ಲಿ ಕಾರು ಚಾಲಕ ವೇಗವಾಗಿ ಬರುತ್ತಿದ್ದ, ಬಿಎಂಟಿಸಿ ಬಸ್ ದಾರಿ ಬಿಡಲಿಲ್ಲ ಎಂದು ಕಿರಿಕ್ ಶುರು ಮಾಡಿದ್ದಾನೆ.
ಬಸ್ ಗೆ ಅಡ್ಡಲಾಗಿ ತಂದು ರಸ್ತೆಯಲ್ಲಿ ಕಾರು ನಿಲ್ಲಿಸಿದ ಚಾಲಕ, ಬಿಎಂಟಿಸಿ ಡ್ರೈವರ್ ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ನಂತರ ಆತನನ್ನು ಕೆಳಗೆಳೆದು ಥಳಿಸಿದ್ದಾನೆ. ರಸ್ತೆಯಲ್ಲಿ ನಡೆದ ಈ ಘಟನೆಯಿಂದ ರಸ್ತೆಯಲ್ಲಿ ಸಂಚಾರ ದಟ್ಟಣೆಯುಂಟಾಗಿತ್ತು.
ಚಾಲಕರಿಬ್ಬರ ಇಂತಹ ಘಟನೆ ಸ್ಥಳೀಯರ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
