ಪ್ರಪಂಚದಲ್ಲಿ ಮನುಷ್ಯ ತೃಣ ಸಮಾನ ಎಂಬ ಸತ್ಯವನ್ನು ಆಗಾಗ ಪ್ರಕೃತಿಯು ಮನದಟ್ಟು ಮಾಡಿಕೊಡುತ್ತಿರುತ್ತದೆ. ಮನುಷ್ಯ ಎಷ್ಟೇ ತಾಂತ್ರಿಕತೆಯನ್ನು ಬಳಸಿದರು ಪತ್ತೆ ಮಾಡಲಾಗದ , ಅಲ್ಲಿಗೆ ತಲುಪಲಾಗದ ಸಾಕಷ್ಟು ಸ್ಥಳಗಳು ಭೂಮಿಯ ಮೇಲೆ ಇವೆ. ಅಲ್ಲಿಗೆ ಹೋದವರು ಮರಳಿ ಬರೋದು ಖಚಿತ ಇಲ್ಲ. ಅಷ್ಟಕ್ಕೂ ಭೂಮಿಯ ಮೇಲೆ ಇರುವಂತಹ ಆ ಭಯಾನಕ ಸ್ಥಳಗಳು ಯಾವುವು ? ಅವು ಇರುವುದಾದರೂ ಎಲ್ಲೇ ಎಂಬ ಮಾಹಿತಿಯನ್ನು ಈ ಸ್ಟೋರಿಯಲ್ಲಿ ನೋಡೋಣ ಬನ್ನಿ.
ಬರ್ಮುಡಾ ಟ್ರಯಾಂಗಲ್
ಈ ಪ್ರದೇಶವು ಅತ್ಯಂತ ಭಯಾನಕ ಪ್ರದೇಶವಾಗಿದೆ. ಪಶ್ಚಿಮ ಉತ್ತರ ಅಟ್ಲಾಂಟಿಕ್‌ನಲ್ಲಿರುವ ಈ ಪ್ರದೇಶ ಟ್ರಯಾಂಗಲ್ ಆಕಾರದ ವ್ಯಾಪ್ತಿಯನ್ನು ಹೊಂದಿದೆ. ಈ ವ್ಯಾಪ್ತಿಯಲ್ಲಿ ಬರುವ ಯಾವುದೇ ವಸ್ತುವನ್ನಾಗಲಿ ತನ್ನತ್ತ ಸೆಳೆಯುವ ಸಾಮರ್ಥ್ಯವನ್ನು ಈ ಪ್ರದೇಶ ಹೊಂದಿದೆ. ಈ ವರೆಗೆ ಇಲ್ಲಿಗೆ ಹೋದ ಹಡಗುಗಳು ಹಾಗೂ ಇದರ ಮೇಲೆ ಹಾರಿದ ವಿಮಾನಗಳು ಮರಳಿ ಬಂದಿಲ್ಲ. ಅವುಗಳು ಎಲ್ಲಿ ಹೋದವು ಎಂಬ ಮಾಹಿತಿಯೂ ತಿಳಿದಿಲ್ಲ. ಇದಕ್ಕೆ ಕಾರಣ ಅಲ್ಲಿನ ನಿಗೂಢ ಶಕ್ತಿ , ಕಾಂತೀಯ ಶಕ್ತಿ ಹಾಗೂ ಮೂರನೇ ಲೋಕಕ್ಕೆ ಕರೆದೊಯ್ಯುವ ದಾರಿ ಎಂದು ಹೇಲಾಗುತ್ತದೆ.
ಮ್ಯಾಗ್ನೆಟಿಕ್ ಹಿಲ್, ಲಡಾಖ್
ಈ ಪ್ರದೇಶವು ಗುರುತ್ವ ಬಲಕ್ಕೆ ವಿರುದ್ಧವಾಗಿ ಮೇಲೇರುವ ಬೆಟ್ಟವಾಗಿದೆ. ಇದು ಭಾರತದ ಲಡಾಖ್ ನಲ್ಲಿ ಕಂಡು ಬರುತ್ತದೆ. ಇದರ ಸುತ್ತ ಮುತ್ತ ಇರುವ ಪರಿಸರದಿಂದಾಗಿ ಈ ರೀತಿಯ ಮೇಲೇರುವ ಭ್ರಮೆಯನ್ನು ಉಂಟು ಮಾಡುತ್ತಿದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಆದರೆ ಸ್ಪಷ್ಟ ಕಾರಣ ಮಾತ್ರ ತಿಳಿದು ಬಂದಿಲ್ಲ.
ಗ್ಯಾಲಪಗೋಸ್ ದ್ವೀಪಗಳು
ಪ್ರಪಂಚದಲ್ಲಿ ಎಲ್ಲಿಯೂ ಕಾಣಸಿಗದ ಜೀವ ಸಂಕುಲಗಳಿಗೆ ಈ ದ್ವೀಪವು ಆಶ್ರಯ ನೀಡಿದೆ. ಈ ದ್ವೀಪ ಭೂಮಿಯಿಂದ ಸಾವಿರ ಮೈಲು ದೂರದಲ್ಲಿದೆ. ಈ ದ್ವೀಪದ ಬಗ್ಗೆ ಸಂಶೋಧಕರಿಗೆ ಇನ್ನು ತಿಳಿಯಲು ಸಾಧ್ಯವಾಗಿಲ್ಲ.
ಕೈಕ್ತಿಯೋ ಪಗೋಡ, ಮ್ಯಾನ್ಮಾರ್
ಒಂದು ಬಂಡೆಯ ಭೂಮಿಯ ಗುರುತ್ವದ ವಿರುದ್ಧವಾಗಿ ಬೆಟ್ಟದ ಮೇಲೆ ನಿಂತಿರುವುದನ್ನು ಮ್ಯಾನ್ಮಾರ್ ನಲ್ಲಿ ನೋಡಬಹುದು . ಇದನ್ನು ಅಲ್ಲಿ ಜನರು ಬುದ್ದನ ಕೂದಲಿನ ಸಹಾಯದಿಂದ ಬಂಡೆ ನಿಂತು ಎಂದು ಹೇಳುತ್ತಾರೆ. ಈ ಸ್ಥಳ ಹೆಚ್ಚು ಆಕರ್ಷಣೆಯ ಸ್ಥಳವಾಗಿದ್ದು ಕಲ್ಲಿನ ತುದಿಯ ಮೇಲೆ ಬಂಡೆ ನಿಂತಿರುವುದು ಅಚ್ಚರಿಯನ್ನು ಮೂಡಿಸುತ್ತದೆ.
ಈಜಿಪ್ಟ್‌ನಲ್ಲಿನ ಗಿಜಾ ಪಿರಮಿಡ್‌ಗಳು
ನಾಗರಿಕತೆಗಳ ತೊಟ್ಟಿಲು ಎಂದೇ ಕರೆಯುವ ಈಜಿಪ್ಟ್ ನ ಪಿರಮಿಡ್ ಗಳ ಶೈಲಿ ಮತ್ತು ಅವುಗಳ ರಚನೆಯನ್ನು ಇಂಜಿನಿಯರ್ ಗಳು ಇಂದಿಗೂ ತಿಳಿಯಲಾಗಿಲ್ಲ. ಸರಿ ಸುಮಾರು 4,500 ವರ್ಷಗಳ ಹಿಂದೆ ನಿರ್ಮಾಣ ಮಾಡಲಾಗಿದೆ ಎನ್ನಲಾದ ಪಿರಮಿಡ್ ಗಳ ಪ್ರತಿ ಕಲ್ಲುಗಳು 2.5 ಟನ್ ತೂಕವನ್ನು ಹೊಂದಿದೆ. ಎತ್ತರಕ್ಕೆ ಆ ಕಲ್ಲುಗಳನ್ನು ಹೇಗೆ ತೆಗೆದುಕೊಂಡು ಹೋಗುತ್ತಿದ್ದರು ಎಂಬ ಪ್ರಶ್ನೆಗೆ ಇಂದಿಗೂ ಉತ್ತರ ಸಿಕ್ಕಿಲ್ಲ.
ನಮ್ಮ ಭೂಮಿಯಲ್ಲಿ ಹತ್ತಾರು ರಹಸ್ಯವಾದ ಸ್ಥಳಗಳು ಇವೆ. ಭೂಮಿಯನ್ನು ಇನ್ನು ಅನ್ವೇಷಣೆ ನಡೆಸುವ ಕೆಲಸ ಸಾಕಷ್ಟು ಇದೆ. ಮನುಷ್ಯ ತಿಳಿದಿರುವುದು ಎಳ್ಳಷ್ಟು ಮಾತ್ರ.