ಬೆಂಗಳೂರು: ಈಗಾಗಲೇ ಉಚಿತ ವಿದ್ಯುತ್ ಪಡೆಯುತ್ತಿರುವ ಮನೆಗಳಿಗೆ ಬಿಟ್ಟು ಹೊಸದಾಗಿ ಪಡೆಯುವ ಸಂಪರ್ಕಗಳಿಗೆ ಮಾತ್ರವೇ ಸ್ಮಾರ್ಟ್ ಮೀಟರ್ ಅಳವಡಿಕೆ ಮಾಡಲು ವಿದ್ಯುತ್ ಇಲಾಖೆ ತೀರ್ಮಾನಿಸಿದೆ.
ಬೆಸ್ಕಾಂ ಸೇರಿದಂತೆ ಎಲ್ಲ ಹೆಸ್ಕಾಂ ವ್ಯಾಪ್ತಿಯಲ್ಲಿ ಸ್ಮಾರ್ಟ್ ಮೀಟರ್ ಅಳವಡಿಕೆಗೆ ತೀರ್ಮಾನಿಸಲಾಗಿದೆ. ಇದಕ್ಕಾಗಿ ಒಂದೂವರೆ ತಿಂಗಳಲ್ಲಿ ಟೆಂಡರ್ ಪ್ರಕ್ರಿಯೆ ನಡೆಸಲಾಗುತ್ತದೆ. ಹಂತಹಂತವಾಗಿ ಸ್ಮಾರ್ಟ್ ಮೀಟರ್ ಅಳವಡಿಕೆ ಪ್ರಕ್ರಿಯೆ ಜಾರಿಗೆ ಬರಲಿದೆ.
ಹೊಸ ಮೀಟರ್ ಗಳನ್ನು ಮಾತ್ರವೇ ಸ್ಮಾರ್ಟ್ ಮೀಟರ್ ಅಳವಡಿಕೆ ಮಾಡಲಾಗುತ್ತದೆ. ಹಿಂದೆ ಇರುವುದನ್ನು ಹಳೇಯದ್ದನ್ನೇ ಮುಂದುವರಿಸುತ್ತೇವೆ. 6000 ರು. ಮೀಟರ್ ಬೆಲೆ ನಿಗದಿಯಾಗಿದೆ ಎಂದು ಹೇಳಲಾಗುತ್ತಿದೆ.