ಬೆಂಗಳೂರು: ಮಲ್ಲೇಶ್ವರದ ಆಟದ ಮೈದಾನದ ಗೇಟ್ ಮುರಿದುಬಿದ್ದು ಹತ್ತು ವರ್ಷದ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ನಡೆದಿದೆ.
ಬಿಬಿಎಂಪಿ ನಿರ್ಲಕ್ಷ್ಯದಿಂದ ಆಟದ ಮೈದಾನದ ಗೇಟ್ ಮುರಿದು ಬಿದ್ದಿದ್ದು, ಹತ್ತು ವರ್ಷದ ಬಾಲಕ ನಿರಂಜನ್ ಮೃತಪಟ್ಟಿದ್ದಾನೆ. ಸೈಕಲ್ ಚೈನ್ ರಿಪೇರಿ ಮಾಡಿಸಿಕೊಂಎಉ ಬರುವುದಾಗಿ ತಾಯಿಗೆ ಹೇಳಿ ಹೋಗಿದ್ದ ಬಾಲಕ ನಿರಂಜನ್ ಸಾವನ್ನಪ್ಪಿದ್ದಾನೆ.
ಗದಗ ಮೂಲದ ದಂಪತಿ ಗಾಂಧಿ ನಗರದಲ್ಲಿ ವಾಸಿಸುತ್ತಿದ್ದು, ಗಂಡ ಆಟೋ ಓಡಿಸುತ್ತಿದ್ದು ತಾಯಿ ಮನೆಗೆಲಸ ಮಾಡುತ್ತಿದ್ದರು. ಮಗ ನಿರಂಜನ್ ಐದನೇ ತರಗತಿ ಓದುತ್ತಿದ್ದರೆ, ಮತ್ತೊಬ್ಬ ಮಗಳಿದ್ದಳು.
ಮಗ ಆಟವಾಡಿಕೊಂಡು ಬರಲು ಸೈಕಲ್ ತೆಗದಯಕೊಂಡು ಹೋದವನು, ಶವವಾಗಿ ಬಿದ್ದಿದ್ದಾನೆ. ಮೈದಾನಕ್ಕೆ ಬಂದ ಆತನ ಮೇಲೆ ಗೇಟ್ ಬಿದ್ದಿದ್ದನ್ನು ನೋಡಿದ ಸ್ನೇಹಿತರು ಗಾಬರಿಯಾಗಿದ್ದಾರೆ
ಶವವನ್ನು ಕೆ.ಸಿಮ ಜನರಲ್ ಆಸ್ಪತ್ರೆಯಲ್ಲಿ ಇಟ್ಟಿದ್ದು, ಸ್ಥಳಕ್ಕೆ ಸ್ಥಳೀಯ ಶಾಸಕ ಹಾಗೂ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಸ್ಥಳೀಯರು ಬಿಬಿಎಂಪಿ ನಿರ್ಲಕ್ಷ್ಯದ ವಿರುದ್ಧ ಕಿಡಿಕಾರಿದ್ದಾರೆ.
