ಬೆಂಗಳೂರು: ಪದೇಪದೇ ಸಂಚಾರ ನಿಯಮ ಉಲ್ಲಂಘನೆ ಮಾಡಿದರೆ, ಅಂತಹವರ ಡಿಎಲ್ ರದ್ದುಪಡಿಸಿ ಎಂದು ಸಿಎಂ ಸಿದ್ದರಾಮಯ್ಯ ಖಡಕ್ ಆದೇಶ ನೀಡಿದ್ದಾರೆ.
ರಾಜ್ಯದಲ್ಲಿ 2023 ರಲ್ಲಿ 40 ಸಾವಿರ ಅಪಘಾತಗಳು ಸಂಭವಿಸಿವೆ. ಸುಮಾರು ಹತ್ತು ಸಾವಿರ ಜನ ಸಾವನ್ನಪ್ಪಿದ್ದಾರೆ. ಇದರಲ್ಲಿ ಶೇ. 82ರಷ್ಟು ಯುವಕರಿದ್ದಾರೆ. ಹೀಗಾಗಿ, ಮುಲಾಜಿಲ್ಲದೆ ನಿಯಮ ಪಾಲನೆ ಮಾಡದವರ ಡಿಲ್ ರದ್ದು ಮಾಡಿ ಎಂದು ತಿಳಿಸಿದ್ದಾರೆ.
ರಸ್ತೆ ಸುರಕ್ಷತಾ ಪ್ರಾಧಿಕಾರ, ಆರೋಗ್ಯ ಇಲಾಖೆ ಹಾಗೂ ಸಾರಿಗೆ ಇಲಾಖೆಯ ಸಹಯೋಗದಲ್ಲಿ 65 ಅತ್ಯಾಧುನಿಕ ಅಂಬ್ಯುಲೆನ್ಸ್ ಗಳ ಸೇವೆಗೆ ಚಾಲನೆ ನೀಡಿ ಮಾತನಾಡಿದ ಅವರು, ಸರಕಾರ ಏನೇ ಕ್ರಮ ತೆಗೆದುಕೊಂಡರೂ, ಜನರ ಭಾಗಿದಾರಿಕೆ ಮುಖ್ಯ. ಹೀಗಾಗಿ, ನಿಯಮ ಪಾಲನೆ ಕಡ್ಡಾಯ ಎಂದರು.
ಕಾರ್ಯಕ್ರಮದಲ್ಲಿ 65 ಅತ್ಯಾಧುನಿಕ ವ್ಯವ್ಥೆಯನ್ನೊಳಗೊಂಡ ಅಂಬ್ಯುಲೆನ್ಸ್ ಗಳಿಗೆ ಚಾಲನೆ ನೀಡಿದರು. ಇದರಲ್ಲಿ 39 ಜೀವರಕ್ಷಕ ಸಾಧನಗಳನ್ನು ಒಳಗೊಂಡ ಅಂಬ್ಯುಲೆನ್ಸ್ ಆಗಿದ್ದರೆ, ಇನ್ನುಳಿದ 26 ಅಂಬ್ಯುಲೆನ್ಸ್ ಗಳು ಸಾಮಾನ್ಯ ಜೀವರಕ್ಷಕ ಸಾಧನಗಳನ್ನು ಒಳಗೊಂಡಿವೆ.
ಕಾರ್ಯಕ್ರಮದಲ್ಲಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ. ರೇವಣ್ಣ, ಶಾಸಕಿ ರೂಪಕಲಾ ಶಶೀಧರ್, ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹರ್ಷಗುಪ್ತಾ ಇದ್ದರು.
