ಬೆಂಗಳೂರು:ರಸ್ತೆ ಗುಂಡಿಗಳನ್ನು ಮುಚ್ಚಲು ಡೆಡ್ ಲೈನ್ ಕೊಟ್ಟಿದ್ದ ಡಿಸಿಎಂ ಡಿ.ಕೆ.ಶಿವಕುಮಾರ್, ಇದೀಗ ನಡುರಾತ್ರಿ ಪರಿಶೀಲನೆ ನಡೆಸಲು ಮುಂದಾಗಿದ್ದಾರೆ.
ಮೊದಲಿಗೆ ಸದಾಶಿವನಗರದಿಂದ ರಾತ್ರಿ 11.30 ಕ್ಕೆ ಹೊರಟು,12 ಗಂಟೆಗೆ ಮೇಕ್ರಿ ಸರ್ಕಲ್, ಜಯಮಹಲ್, ಎಂ.ಜಿ.ರಸ್ತೆ, ಇಂದಿರಾ ನಗರ, ಹಳೇ ಮದ್ರಾಸ್ ರಸ್ತೆ, ಬಿನ್ನಮಂಗಲ ಜಂಕ್ಷನ್, ದೊಮ್ಮಲೂರು ಮೇಲ್ಸೇತುವೆ ಮೂಲಕ ಹಳೇ ವಿಮಾನ ನಿಲ್ದಾಣ ರಸ್ತೆಯಲ್ಲಿ ಪರಿಶೀಲನೆ ನಡೆಸಲಿದ್ದಾರೆ.
ಅನಂತರ ಮಾಗಡಿ ರಸ್ತೆಯಲ್ಲಿ, ಡಾ. ರಾಜ್ ಕುಮಾರ್ ರಸ್ತೆ, ವಾಟಾಳ್ ನಾಗರಾಜ್ ರಸ್ತೆ ಮತ್ತು ಓಕಳೀಪುರ ರಸ್ತೆಗಳಲ್ಲಿ ಪರಿಶೀಲನೆ ನಡೆಸಲಿದ್ದಾರೆ.

