ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ-2 ಆರೋಪಿಯಾಗಿ ಬಳ್ಳಾರಿಯ ಸೆಂಟ್ರಲ್ ಜೈಲಿನ ಸೆಲ್ ನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ತೂಗುದೀಪ್ ಅವರಿಗೆ ಈಗ ಮತ್ತೊಂದು ಸಂಕಷ್ಟ ಎದುರಾಗಿದೆ.
ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಲಕ್ಷ ಲಕ್ಷ ಹಣದ ವಹಿವಾಟು ನಡೆಸಲು ಮುಂದಾದ ಜಾಲದ ಕುರಿತು ಖುದ್ದು ಐಟಿ ಅಧಿಕಾರಿಗಳೇ ತನಿಖೆಗೆ ಮುಂದಾಗಿದ್ದಾರೆ.
ಇದೀಗ ಐಟಿ ಅಧಿಕಾರಿಗಳು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಳಿಸಿದ ಹಣದ ಮೂಲ ಯಾವುದು ಎಂಬ ಬಗ್ಗೆ ತನಿಖೆಗೆ ಮುಂದಾಗಿದ್ದಾರೆ.
ಇದಕ್ಕಾಗಿ ಬಳ್ಳಾರಿ ಜೈಲಿನಲ್ಲಿರುವ ದರ್ಶನ್ ಭೇಟಿಗೆ ಜೈಲಾಧಿಕಾರಿಗಳಿಂದ ಐಟಿ ಅಧಿಕಾರಿಗಳು ಸಮಯ ಕೇಳಿದ್ದಾರೆ. ಎರಡು ದಿನಗಳಲ್ಲಿ ಬಳ್ಳಾರಿ ಸೆಂಟ್ರಲ್ ಜೈಲಿಗೆ ಬರಲಿರುವ ಐಟಿ ಅಧಿಕಾರಿಗಳು ಸಹಕಾರ ಕೋರಿ ಜೈಲಾಧಿಕಾರಿಗಳಿಗೆ ಮೇಲ್ ಮಾಡಿದ್ದಾರೆ.