ಬೆಂಗಳೂರು: ತುಮಕೂರು ಮತ್ತು ಹೊಸೂರು ಮಧ್ಯೆ ಮೂರು ಹೊಸ ಮೆಮು ರೈಲುಗಳನ್ನು ಘೋಷಿಸಲಾಗಿದ್ದು, ಸೆ.27ರಂದು ರೈಲ್ವೆ ಇಲಾಖೆ ರಾಜ್ಯ ಸಚಿವ ಸೋಮಣ್ಣ ಚಾಲನೆ ನೀಡಲಿದ್ದಾರೆ.
ಇವುಗಳಲ್ಲಿ ಎರಡು ರೈಲುಗಳು ಯಶವಂತಪುರವನ್ನು ತುಮಕೂರು ಮತ್ತು ಹೊಸೂರಿನೊಂದಿಗೆ ಸಂಪರ್ಕಿಸಲಿವೆ. ಮೂರನೆಯದು ಬಾಣಸವಾಡಿ ಮತ್ತು ತುಮಕೂರು ನಡುವೆ ಸಂಚರಿಸಲಿವೆ. ಎಲ್ಲ ರೈಲುಗಳೂ ತಲಾ ಎಂಟು ಕೋಚ್ಗಳನ್ನು ಹೊಂದಿರಲಿವೆ.
ಯಶವಂತಪುರ ತುಮಕೂರು ಮೆಮು ರೈಲಿನ ವಿವರ
ರೈಲು ಸಂಖ್ಯೆ 06201/06202 ರ ನಿಯಮಿತ ಸೇವೆಗಳು ಸೆಪ್ಟೆಂಬರ್ 27 ರಂದು ಯಶವಂತಪುರದಿಂದ ಮತ್ತು ಸೆಪ್ಟೆಂಬರ್ 28 ರಂದು ತುಮಕೂರಿನಿಂದ ಪ್ರಾರಂಭವಾಗಲಿವೆ. ರೈಲು ಸಂಖ್ಯೆ 06201 ಭಾನುವಾರ ಹೊರತುಪಡಿಸಿ ಎಲ್ಲಾ ದಿನಗಳಲ್ಲಿ ಕಾರ್ಯನಿರ್ವಹಿಸುತ್ತದೆ. ತುಮಕೂರಿನಿಂದ ಬೆಳಗ್ಗೆ 8.45ಕ್ಕೆ ಹೊರಟು 10.25ಕ್ಕೆ ಯಶವಂತಪುರ ತಲುಪಲಿದೆ.
ರೈಲು ಸಂಖ್ಯೆ 06202 ಭಾನುವಾರ ಹೊರತುಪಡಿಸಿ ಎಲ್ಲಾ ದಿನಗಳಲ್ಲಿ ಕಾರ್ಯನಿರ್ವಹಿಸಲಿದ್ದು, ಯಶವಂತಪುರದಿಂದ ಸಂಜೆ 5.40 ಕ್ಕೆ ಹೊರಟು 7.05 ಕ್ಕೆ ತುಮಕೂರು ತಲುಪಲಿದೆ.