ರಾಜಕೀಯ ಸುದ್ದಿ

ಅ.5ರಂದು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಹಣ ಬಿಡುಗಡೆ

Share It

ನವದೆಹಲಿ: ಅಕ್ಟೋಬರ್ 5ರಂದು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಹಣವನ್ನು ಸರ್ಕಾರ ಬಿಡುಗಡೆ ಮಾಡಲಿದೆ.

ವರ್ಷಕ್ಕೆ ಮೂರು ಬಾರಿ ನೀಡಲಾಗುವ ಈ ವರೆಗೆ 17 ಕಂತಿನ ಹಣವನ್ನು ಸರ್ಕಾರ ಬಿಡುಗಡೆ ಮಾಡಿದೆ. ಅ. 5ಕ್ಕೆ 18ನೇ ಕಂತಿನ ಹಣ ರಿಲೀಸ್ ಆಗಲಿದೆ.
ಜೂನ್ 18ಕ್ಕೆ 17ನೇ ಕಂತಿನ ಹಣ ಬಿಡುಗಡೆ ಆಗಿತ್ತು.

2019ರಲ್ಲಿ ಆರಂಭವಾದ ಈ ಯೋಜನೆಯಲ್ಲಿ ಎಲ್ಲಾ ನೋಂದಾಯಿತ ರೈತರಿಗೆ ವರ್ಷಕ್ಕೆ ಮೂರು ಕಂತುಗಳಲ್ಲಿ 6,000 ರೂ ಹಣವನ್ನು ಸರ್ಕಾರ ಸಹಾಯಧನವಾಗಿ ನೀಡುತ್ತದೆ. ಪ್ರತೀ ಕಂತಿನಲ್ಲೂ ರೈತರಿಗೆ 2,000 ರೂ ಸಿಗುತ್ತದೆ.

ಎರಡು ಹೆಕ್ಟೇರ್ ಅಥವಾ ಐದು ಎಕರೆಯೊಳಗಿನ ಜಮೀನು ಹೊಂದಿರುವ ರೈತರು ಈ ಸ್ಕೀಮ್​ಗೆ ಅರ್ಹರಾಗಿದ್ದು, ಸಣ್ಣ ರೈತರಿಗೆ ವ್ಯವಸಾಯಕ್ಕೆ ಸಹಾಯಾಗಲೆಂದು ಸರ್ಕಾರ ಈ ಸ್ಕೀಮ್ ಆರಂಭಿಸಿದೆ. ಇಲ್ಲಿಯವರೆಗೆ ಸುಮಾರು 10 ಕೋಟಿ ರೈತರು ಸ್ಕೀಮ್​ಗೆ ನೋಂದಾಯಿಸಿಕೊಂಡಿದ್ದಾರೆ.


Share It

You cannot copy content of this page