ಬ್ಲ್ಯಾಕ್ ಮೇಲ್ ಮಾಡಿ ಹಣಕ್ಕೆ ಡಿಮ್ಯಾಂಡ್: ದೂರು ದಾಖಲು

Share It

ಬೆಂಗಳೂರು: ಸಾಮಾಜಿಕ ಕಾರ್ಯಕರ್ತ ಭಾಸ್ಕರ್ ಪ್ರಸಾದ್ ಗೆ ಬ್ಲ್ಯಾಕ್ ಮೇಲ್ ಮಾಡಿ ಹಣಕ್ಕೆ ಡಿಮ್ಯಾಂಡ್ ಮಾಡಿರುವ ಆರೋಪ ಕೇಳಿ ಬಂದಿದ್ದು ಸಂಧ್ಯಾ, ಪವಿತ್ರಾ ನಾಗರಾಜ್ ವಿರುದ್ಧ ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಬೆದರಿಕೆ ಹಾಕಿ 10 ಲಕ್ಷ ಹಣಕ್ಕೆ ಡಿಮ್ಯಾಂಡ್ ಮಾಡಿದ್ದಾರೆಂದು ದೂರಿನಲ್ಲಿ ತಿಳಿಸಿದ್ದಾರೆ.
ಚಳುವಳಿ ಹಾಗೂ ಹೋರಾಟಗಳಲ್ಲಿ ಭಾಸ್ಕರ್ ಪ್ರಸಾದ್​ಗೆ ಪವಿತ್ರ ಎಂಬುವವರು ಪರಿಚಯವಾಗಿದ್ದರು. 2 ವರ್ಷಗಳಿಂದ ಇವರಿಬ್ಬರ ನಡುವೆ ಮಾತುಕಥೆ ಇತ್ತು.

ಆ.8ರಂದು ಪವಿತ್ರಾ ಅವರು ವಾಟ್ಸಾಪ್ ಮೂಲಕ ಲೈಂಗಿಕ ಸಂಪರ್ಕಕ್ಕೆ ಒತ್ತಾಯ ಮಾಡಿದ್ದಾರೆ. ಮಾನಹರಣ ಮಾಡುವ ಉದ್ದೇಶದಿಂದ ಬೆದರಿಕೆ ಹಾಕಿ 10 ಲಕ್ಷಕ್ಕೆ ಡಿಮ್ಯಾಂಡ್ ಮಾಡಿದ್ದಾರೆ. ನಂತರ ನೇರವಾಗಿ ಸಿಕ್ಕಾಗ ಅಪಪ್ರಚಾರ ಮಾಡಿ, ಅವಾಚ್ಯವಾಗಿ ನಿಂದಿಸಿದ್ದಾರೆ ಎಂದು ಭಾಸ್ಕರ್ ಪ್ರಸಾದ್ ಅವರು ಆರೋಪ ಮಾಡಿದ್ದಾರೆ.

ಅಷ್ಟೇ ಅಲ್ಲದೆ 10 ಲಕ್ಷ ಹಣ ನೀಡದಿದ್ದರೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಾರೆ ಪ್ರಕರಣ ದಾಖಲಿಸಲಾಗಿದೆ.


Share It

You May Have Missed

You cannot copy content of this page