ಉಪಯುಕ್ತ ಸುದ್ದಿ

ಬೆಣ್ಣೆಹಳ್ಳದ ನೀರಾವರಿ ಯೋಜನೆಗೆ ಸರಕಾರದ ಬಂಪರ್ ಕೊಡುಗೆ; 200 ಅನುದಾನ ಬಿಡುಗಡೆ

Share It

ಬೆಂಗಳೂರು: ಧಾರವಾಡ ಜಿಲ್ಲೆಯ ಬಹುಮುಖ್ಯ ನೀರಿನ ಮೂಲವಾದ ಬೆಣ್ಣೆಹಳ್ಳ ಯೋಜನೆಗೆ 200 ಕೋಟಿ. ರು.ಗಳ ಅನುದಾನವನ್ನು ಸರಕಾರ ನಿಗದಿಪಡಿಸಿದೆ.

ರಾಜ್ಯ ಸಚಿವ ಸಂಪುಟದಲ್ಲಿ ಈ ಕುರಿತು ತೀರ್ಮಾನ ತೆಗೆದುಕೊಂಡಿದ್ದು, ಅದಕ್ಕಾಗಿ 200 ಕೋಟಿ ರು. ಅನುದಾನ ನಿಗದಿ ಮಾಡಲಾಗಿದೆ. ಯೋಜನೆ ಜಾರಿಯಿಂದ ಹುಬ್ಬಳ್ಳಿ, ನವಲಗುಂದ, ನರಗುಂದ, ಹಾವೇರಿ, ಕುಂದಗೋಳ ತಾಲೂಕಿನ ರೈತರಿಗೆ ಅನುಕೂಲವಾಗಲಿದೆ.

ಯೋಜನೆಯ ಜಾರಿಯಿಂದ 16 ಟಿಎಂಸಿ ನೀರು ಸಂಗ್ರಹವಾಗುತ್ತಿದೆ. ಶಿಗ್ಗಾವಿ, ಕುಂದಗೋಳ, ನವಲಗುಂದ, ನರಗುಂದ, ಹುಬ್ಬಳ್ಳಿ ಭಾಗದಲ್ ಬಂದು ಅನೇಕ ಸಮಸ್ಯೆಯಾಗುತ್ತದೆ.

ಪ್ರವಾಹ ನಿಯಂತ್ರಣ ಹಾಗೂ ಶಾಶ್ವತ ಪರಿಹಾರ ನೀಡಿ ಮಲಪ್ರಭಾಗೆ ಸೇರುತ್ತದೆ. ಅದನ್ನು ನಿರ್ವಹಣೆ ಮಾಡಲು ತೀರ್ಮಾನಿಸಲಾಗಿದೆ. ಇದಕ್ಕಾಗಿ ಯೋಜನೆ ಜಾರಿ ಮಾಡಲಾಗಿದೆ.

ಉತ್ತರ ಕರ್ನಾಟಕದ ಪ್ರಮುಖ ಬೇಡಿಕೆ ಬೆಣ್ಣೆಹಳ್ಳ ಯೋಜನೆಗೆ 200 ಕೋಟಿ ರು. ಅನುದಾನ ನಿಗದಿ ಮಾಡಿರುವ ರಾಜ್ಯ ಸಚಿವ ಸಂಪುಟ ತೀರ್ಮಾನಕ್ಕೆ ಸ್ವಾಗತ. ಇದು ಈ ಭಾಗದ ಜನರಿಗೆ ಬಹುಮುಖ್ಯ ತೀರ್ಮಾನ. ಸಿಎಂ ಮತ್ತು ಸಚಿವ ಸಂಪುಟಕ್ಕೆ ನನ್ನ ಅಭಿನಂದನೆ.

  • ಎನ್.ಎಚ್. ಕೋನರೆಡ್ಡಿ, ನವಲಗುಂದ ಶಾಸಕರು

Share It

You cannot copy content of this page