ಬೆಂಗಳೂರು ವಿವಿಯಲ್ಲಿ ಅತಿಥಿ ಉಪನ್ಯಾಸಕರ ಹುದ್ದೆಗೆ ನೇಮಕಾತಿ
ಬೆಂಗಳೂರು: ವಿವಿ ಅಥಿತಿ ಉಪನ್ಯಾಸಕರ ನೇಮಕಾತಿಗೆ ಸಂಬಂಧಪಟ್ಟಂತೆ ಕಳೆದ ಆಗಸ್ಟ್ ನಲ್ಲಿ ಅರ್ಜಿ ಕರೆದಿತ್ತು. ಆದರೆ ದಿನಾಂಕವನ್ನು ಈಗ ಮುಂದೂಡಿದ್ದು, ಅರ್ಜಿಯನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ ಎಂದು ವಿವಿ ಪ್ರಕಟಣೆ ತಿಳಿಸಿದೆ.
ವಿವಿಯ ವಿವಿಧ ಸ್ನಾತಕ ಮತ್ತು ಸ್ನಾತಕೋತ್ತರ ಪದವಿಗಳ ಅತಿಥಿ ಉಪನ್ಯಾಸಕ ನೇಮಕಾತಿಗೆ ಅರ್ಜಿಯನ್ನು ಕರೆದಿದ್ದು. 30-10-2024 ರ ವರೆಗೆ ಅರ್ಜಿಯನ್ನು ವಿಸ್ತರಣೆ ಮಾಡಿದೆ. ಹಾಗೂ ಅಭ್ಯರ್ಥಿಗಳು ತಮ್ಮ ದಾಖಲೆಗಳನ್ನು ವಿವಿಗೆ ಸಲ್ಲಿಸಲು 4-10-2024 ರ ವರೆಗೆ ಅವಕಾಶ ಇದೆ.
ಇನ್ನು ಹಲವು ಹುದ್ದೆಗಳಾದ ಪ್ರಾಂಶುಪಾಲರು, ಸಹಾಯಕ ಗ್ರಂಥಪಾಲಕರು, ದೈಹಿಕ ಶಿಕ್ಷಣ,
ಸಹಾಯಕ ನಿರ್ದೇಶಕರು- ದೈಹಿಕ ಶಿಕ್ಷಣ,ಶಿಕ್ಷಕರ (ವಿಶ್ವವಿದ್ಯಾನಿಲಯದ ಮಹಿಳಾ ಕಾಲೇಜು ಮತ್ತು ಜ್ಞಾನಜ್ಯೋತಿ ಸೆಂಟ್ರಲ್ ಕಾಲೇಜು ಆವರಣ),ಲ್ಯಾಬ್ ಅಸಿಸ್ಟೆಂಟ್ (ಕಂಪ್ಯೂಟರ್ ಸೈನ್ಸ್ ಲ್ಯಾಬ್) ಸಂಯೋಜಕರು-ಸ್ನಾತಕ ಪದವಿ ಕೋರ್ಸುಗಳಿಗೆ, ಉಪನಿರ್ದೇಶಕರು- ಪ್ರಸಾರಾಂಗ ಮತ್ತು ತಾಂತ್ರಿಕ ಸಹಾಯಕರ ಹುದ್ದೆಗಳಿಗೂ ದಾಖಲೆಗಳನ್ನು ವಿವಿಗೆ ಸಲ್ಲಿಸಲು 4-10-2024 ರ ವರೆಗೆ ಅವಕಾಶ ಇದೆ.
ಅರ್ಜಿಯ ಶುಲ್ಕ :
ಸಾಮಾನ್ಯ ಅಭ್ಯರ್ಥಿಗೆ 200 ರೂ
ST,SC ಅಭ್ಯರ್ಥಿಗಳಿಗೆ 100 ರೂ
ನೇಮಕಾತಿಯ ವಿಷಯಗಳು :
ವಿಜ್ಞಾನ ವಿಷಯಗಳು
ಗಣಿತಶಾಸ್ತ್ರ, ರಸಾಯನಶಾಸ್ತ್ರ, ,ಪರಿಸರ ವಿಜ್ಞಾನ, ವಿಜ್ಞಾನ, ಭೌತಶಾಸ್ತ್ರ, ಉಡುಪು ಮತ್ತು ತಂತ್ರಜ್ಞಾನ (IG&PG), ಬಿಸಿಎ- Artificial Intelligence and Machine Learning – Data Science.ಗಣಕ ವಿಜ್ಞಾನ – ಎಂ.ಎಸ್ಸಿ ಗಣಕ ವಿಜ್ಞಾನ, ಜೀವರಸಾಯನಶಾಸ್ತ್ರ, ಸಸ್ಯವಿಜ್ಞಾನ, ಬಿಸಿಎ,
ಕಲಾ ವಿಭಾಗ
ಅರ್ಥಶಾಸ್ತ್ರ, ಕನ್ನಡ, ಇಂಗ್ಲೀಷ್, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ, ಇತಿಹಾಸ, ಹಿಂದಿ, ಸಮಾಜಕಾರ್ಯ, ಸಂವಹನ ಮತ್ತು ಪತ್ರಿಕೋದ್ಯಮ, ಜಾಗತಿಕ ಭಾಷೆಗಳು, (ಜರ್ಮನ್, ಫ್ರೆಂಚ್, ಸ್ಪ್ಯಾನಿಷ್, ಜಪಾನೀಸ್, ಕೊರಿಯನ್, ಚೈನೀಸ್)
ವೇತನದ ವಿವರ :
NET / SLET/ Ph.D ಹೊಂದಿರುವ ಪೂರ್ಣಾವಧಿ ಅತಿಥಿ ಉಪನ್ಯಾಸಕರಿಗೆ ( ವಾರಕ್ಕೆ 16 ಗರಿಷ್ಠ 64 ಗಂಟೆಗಳ) ಪ್ರತಿ ಗಂಟೆಗೆ 780/ಗರಿಷ್ಠ ರೂ. 49,920/-
NET / SLET/ Ph.D ಇಲ್ಲದಿರುವ (ವಾರಕ್ಕೆ 16 ಗುಷ್ಟ 64 ಗಂಟೆಗಳ) ಪ್ರತಿ ಗಂಟೆಗೆ 680/-ಗರಿಷ್ಠ ರೂ. 43,520/-
ಉಳಿದ ಅರೆಕಾಲಿಕೆ ಅತಿಥಿ ಉಪನ್ಯಾಸಕರು:i) NET / SLET Ph.D ಹೊಂದಿರುವii) NET / SLET/ Ph.D ಇಲ್ಲದಿರುವವರಿಗೆ ಪ್ರತಿ ಗಂಟೆಗೆ ರೂ. 780/-ಪ್ರತಿ ಗಂಟೆಗೆ ರೂ. 680/-
ವೃತ್ತಿಪರ ವಿದ್ವಾಂಸರು | ಉದ್ಯಮಗಳ ಪರಿಣಿತರು / ಶಿಕ್ಷಣ ತಜ್ಞರು ನೀಡುವ ಆಹ್ವಾನಿತ ಉಪನ್ಯಾಸಗಳಿಗೆ ಪ್ರತಿ ಗಂಟೆಗೆ ರೂ. 2000/-ಗರಿಷ್ಠ ವಾರಕ್ಕೆ 5 ಗಂಟೆಗಳು.
ಸ್ನಾತಕೋತ್ತರ ಅಧ್ಯಯನ ವಿಭಾಗದಲ್ಲಿ ಇಬ್ಬರು ಪೂರ್ಣಾವಧಿಯ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲಿದ್ದು, ಇವರು ವಿಭಾಗದ ಮುಖ್ಯಸ್ಥರಿಗೆ ಆಡಳಿತಾತ್ಮಕವಾಗಿ ನಿರ್ವಹಣೆ ಮಾಡಬೇಕು.
ಆಯ್ಕೆಯಾದ ಅಭ್ಯರ್ಥಿಗಳನ್ನು ಮಹಿಳಾ ಘಟಕ ಕಾಲೇಜು ಅಥವಾ ಸೆಂಟ್ರಲ್ ಕಾಲೇಜು ಆವರಣದಲ್ಲಿರುವ ಮುಖ್ಯ ಕ್ಯಾಂಪಸ್‌ಗೆ ನೇಮಕ ಮಾಡುವ ಹಕ್ಕನ್ನು ವಿವಿಯು ಹೊಂದಿರುತ್ತದೆ. ವಿವಿಯ ನೀತಿ ನಿಯಮ ಮತ್ತು ಮೀಸಲಾತಿಗೆ ಅನುಗುಣವಾಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.


