ತರಕಾರಿಗಳು ಉತ್ತಮ ಆರೋಗ್ಯಕ್ಕೆ ಪೂರಕ; ಎಚ್ವರ ತಪ್ಪಿದರೆ ಆಗಲೂಬಹುದು ಮಾರಕ !
ಹಸಿರು ತರಕಾರಿಗಳು ಮತ್ತು ಹಣ್ಣುಗಳನ್ನು ಸೇವನೆ ಮಾಡುವುದರಿಂದ ನಮ್ಮ ದೇಶವು ಶಕ್ತಿಯುತವಾಗುತ್ತದೆ. ಮೆದುಳು ಸಹ ಚುರುಕುಗೊಳ್ಳುತ್ತದೆ. ಆದ್ರೆ ಸೊಪ್ಪು ಮತ್ತು ತರಕಾರಿಗಳನ್ನು ತಿನ್ನುವಾಗ ತುಸು ಎಚ್ಚರ ತಪ್ಪಿದರೂ ನಮ್ಮ ಮೆದುಳಿಗೆ ಸಮಸ್ಯೆ ಉಂಟಾಗುತ್ತದೆ. ಅಷ್ಟಕ್ಕೂ ತರಕಾರಿ ಸೊಪ್ಪಿನಿಂದ ನಮ್ಮ ಮೆದುಳಿಗೆ ಹೇಗೆ ಸಮಸ್ಯೆ ಉಂಟಾಗುತ್ತದೆ ಎಂದು ಕೇಳುತ್ತೀರಾ! ಆಗಿದ್ರೆ ಈ ಸ್ಟೋರಿ ನೋಡಿ.
ಮುಖ್ಯವಾಗಿ ಎಲೆಕೋಸು ಮತ್ತು ಹೂ ಕೋಸುಗಳಲ್ಲಿ ಟೇಪ್ ವರ್ಮ್ಗಳು ಎಂಬ ಜೀವಿಗಳಿರುತ್ತವೆ. ಇವುಗಳು ಅಪ್ಪಿ ತಪ್ಪಿಯೂ ಮೆದುಳಿಗೆ ಹೋಗಬಾರದು. ಒಂದು ವೇಳೆ ಹೋದ್ರೆ ಮೆದುಳಿನ ಸೋಂಕು ಗ್ಯಾರಂಟಿ ಎಂದು ಹೇಳಬಹುದು.
ಹೂಕೋಸು
ಹೂ ಕೋಸು ನೋಡಲು ಬಲು ಸುಂದರವಾಗಿ ಕಾಣುತ್ತದೆ. ಆದರೆ ಇದರ ಒಳಗೆ ಹುಳುಗಳು ಅಥವಾ ಆರೋಗ್ಯಕ್ಕೆ ಹಾನಿಯುಂಟು ಮಾಡುವ ಜೀವಿಗಳು ಇರುತ್ತವೆ. ಅವು ಹಸಿರು, ನೀಲಿ ಮತ್ತು ಬಿಳಿ ಬಣ್ಣದಿಂದ ಕೂಡಿರುತ್ತವೆ. ಕೆಲವು ನಮ್ಮ ಕಣ್ಣಿಗೆ ಕಂಡರೆ ಇನ್ನು ಕೆಲವು ಸೂಕ್ಷ್ಮಾಣು ಜೀವಿಗಳಾಗಿರುತ್ತವೆ. ಅವುಗಳು ನಮ್ಮ ದೇಹವನ್ನು ಸುಲಭವಾಗಿ ಸೇರಿ ನಮ್ಮ ಸ್ನಾಯುಗಳು, ಮೆದುಳು ಹಾಗೂ ಯಕೃತ್ತು ಭಾಗಗಳ ಮೇಲೆ ತೀವ್ರ ಪರಿಣಾಮವನ್ನು ಬೀರುತ್ತವೆ. ಆದಷ್ಟು ಎಚ್ಚರಿಕೆಯಿಂದ ಒಳ್ಳೆದ ಹೂ ಕೋಸನ್ನ ಖರೀದಿ ಮಾಡಿ.
ಬದನೆ ಕಾಯಿ
ಕೆಲವರಿಗೆ ಬದನೆ ಕಂಡರೆ ಆಗುವುದಿಲ್ಲ. ಇನ್ನು ಕೆಲವರಿಗೆ ಬದನೆ ಸಾರು ಅಂದ್ರೆ ಇಷ್ಟ ಪಡ್ತಾರೆ. ಆದರೆ ಬದನೆ ನಾವು ಅಂದುಕೊಂಡಷ್ಟು ಒಳ್ಳೆಯ ತರಕಾರಿ ಅಲ್ಲ. ಬದನೆಯಲ್ಲಿ ಮೆದುಳಿಗೆ ಹನಿ ಮಾಡುವ ಸೂಕ್ಷ್ಮಾಣು ಜೀವಿಗಳಿರುತ್ವೆ. ಬದನೆಯಲ್ಲಿ ಒಮ್ಮೆ ಹುಳು ಕಂಡರೆ ಅದನ್ನು ಪೂರ್ತಿ ಹೊರ ಹಾಕಿ. ಕೆಟ್ಟದ್ದನ್ನು ಮಾತ್ರ ಕತ್ತರಿಸಿ ಬಳಸುವುದನ್ನು ನಿಲ್ಲಿಸಿ. ಇದು ಬಹಳ ಅಪಾಯಕಾರಿ.
ದಪ್ಪ ಮೆಣಸಿನ ಕಾಯಿ
ಇದರಲ್ಲಿಯೂ ಸಹ ಒಂದಷ್ಟು ಹಾನಿಕಾರಕ ಸೂಕ್ಷ್ಮಾಣು ಜೀವಿಗಳಿದ್ದು ಹೆಚ್ಚು ಬೇಯಿಸಿ ತಿನ್ನಿ. ಅಥವಾ ಇದರ ಅತಿಯಾದ ಬಳಕೆಯನ್ನು ಕಡಿಮೆ ಮಾಡುವುದು ಒಳ್ಳೆಯದು.
ಕೆಸುವಿನ ಸೊಪ್ಪು
ಇದು ಕೆಲವರಿಗೆ ಮಾತ್ರ ಗೊತ್ತಿರುವ ಸೊಪ್ಪಾಗಿದೆ. ಇದರಿಂದ ರುಚಿಕರವಾದ ಪಲ್ಯವನ್ನು ತಯಾರು ಮಾಡಬಹುದು. ಇದು ಸಹ ಅಪಾಯಕಾರಿ
ತೊಂಡೆ ಕಾಯಿ
ಇದು ಸಹ ನಮ್ಮ ಆರೋಗ್ಯಕ್ಕೆ ಒಳ್ಳೆಯು ಅಭ್ಯಾಸವೇ. ಆದರೆ ಇದರಲ್ಲಿಯೂ ಮೆದುಳಿಗೆ ಹಾನಿ ಉಂಟು ಮಾಡುವ ಸೂಕ್ಷ್ಮಾಣು ಜೀವಿಗಳು ಇರುವುದು ಅಷ್ಟೇ ಸತ್ಯ. ಆದ್ದರಿಂದ ಪ್ರೆಶ್ ಆದ ಮತ್ತು ಸ್ವಚ್ಛವಾದ ಹಣ್ಣನ್ನು ಉಪಯೋಗಿಸಿ.
ಆರೋಗ್ಯವೇ ಭಾಗ್ಯ ಎಂಬಂತೆ ನಮ್ಮ ಆರೋಗ್ಯಕ್ಕಾಗಿಯೇ ಎಲ್ಲವನ್ನೂ ಸೇವನೆ ಮಾಡುತ್ತೇವೆ. ಆದರೆ ಯಾಮರಿದರೆ ನಮ್ಮ ಜೀವಕ್ಕೆ ಕುತ್ತು ಬರುತ್ತದೆ. ಆದ್ದರಿಂದ ತರಕಾರಿಗಳನ್ನು ಕೊಳ್ಳುವಾಗ ಎಚ್ಚರಿಕೆಯಿಂದ ಹೊಸದನ್ನು ನೋಡಿ ಕೊಂಡುಕೊಳ್ಳಿ.


