ಪದವಿ ಕೋರ್ಸುಗಳನ್ನು ಮುಗಿಸಿ ಉದ್ಯೋಗಕ್ಕಾಗಿ ಕಾಯುತಿದ್ದೀರ.? ಆಗಿದ್ರೆ ಬಳ್ಳಾರಿಯ ಎನ್‌ಹೆಚ್‌ಎಂ / ಎನ್‌ಯುಹೆಚ್‌ಎಂ ಮತ್ತು ಪಿಎಂ ಅಭೀಮ್ ಅಡಿಯಲ್ಲಿ ವಿವಿಧ ವೃಂದದ ಹುದ್ದೆಗಳಿಗೆ ಗುತ್ತಿಗೆಯ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುವುದು. ಇಂದೇ ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಹುದ್ದೆಗಳ ವಿವರ :
ಬ್ಲಾಕ್ ಎಪಿಡೆಮಿಯೋಲಾಜಿಸ್ಟ್- 1
ಸ್ಟಾಫ್ ನರ್ಸ್- 45
ಆಡಿಯೋಮೆಟ್ರಿಕ್ ಅಸಿಸ್ಟಂಟ್- 1
ಇನ್‌ಸ್ಟ್ರಕ್ಟರ್- 1
ಜಿಲ್ಲಾ ಸಂಯೋಜಕರು- 1
ಕಿರಿಯ ಆರೋಗ್ಯ ಸಹಾಯಕ- 12
ಆಪ್ತ ಸಹಾಯಕರು- 1
ವೇತನ:
- ಕಿರಿಯ ಆರೋಗ್ಯ ಸಹಾಯಕ : Rs.14,044 – 16,886.
- ಬ್ಲಾಕ್ ಎಪಿಡೆಮಿಯೋಲಾಜಿಸ್ಟ್: Rs.30,000.
3.ಆಪ್ತ ಸಹಾಯಕರು : Rs.14558 – 17,059
4.ಇನ್‌ಸ್ಟ್ರಕ್ಟರ್: Rs.15,000.
5.ಜಿಲ್ಲಾ ಸಂಯೋಜಕರು : Rs.30,000.
6.ಸ್ಟಾಫ್ ನರ್ಸ್ : Rs.14,186-17,059.
- ಆಡಿಯೋಮೆಟ್ರಿಕ್ ಅಸಿಸ್ಟಂಟ್: Rs.15,000.
ವಿದ್ಯಾರ್ಹತೆ :
ಬೇರೆ ಬೇರೆ ಹುದ್ದೆಗಳಿಗೆ ಬೇರೆ ಬೇರೆ ವಿದ್ಯಾರ್ಹತೆಯನ್ನು ಕೇಳಲಾಗಿದೆ.
- ಕಿರಿಯ ಆರೋಗ್ಯ ಸಹಾಯಕ : ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ, ಡಿಪ್ಲೊಮ.
2.ಬ್ಲಾಕ್ ಎಪಿಡೆಮಿಯೋಲಾಜಿಸ್ಟ್: ಪದವಿ, ಪಿಜಿ, ಎಂಎಸ್ಸಿ , ಎಂಪಿಹೆಚ್.
- ಇನ್‌ಸ್ಟ್ರಕ್ಟರ್: ಡಿಪ್ಲೊಮ.
- ಆಡಿಯೋಮೆಟ್ರಿಕ್ ಅಸಿಸ್ಟಂಟ್: ಡಿಪ್ಲೊಮ.
- ಸ್ಟಾಫ್ ನರ್ಸ್ : ಜಿಎನ್‌ಎಂ, ಬಿಎಸ್ಸಿ ನರ್ಸಿಂಗ್.
- ಜಿಲ್ಲಾ ಸಂಯೋಜಕರು : ಬಿಎಸ್ಸಿ, ಬಿಡಿಎಸ್, ಬಿಎಎಂಎಸ್, ಬಿಹೆಚ್‌ಎಂಎಸ್, ಬಿಯುಎಂಎಸ್, ಬಿವೈಎನ್‌ಎಸ್, ಎಂಎಸ್ಸಿ, ಎಂಪಿಹೆಚ್, ಎಂಬಿಎ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ
03-10-2024. ರ ಒಳಗೆ ಅರ್ಜಿಯನ್ನು ಸಲ್ಲಿಸಬೇಕು. ಅರ್ಜಿಯನ್ನು Ballari.nic.in ನಲ್ಲಿ ಪಡೆಯಬಹುದು. ಅಥವಾ ನೇರವಾಗಿ ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿಗಳ ಕಚೇರಿ, ಜಿಲ್ಲಾ ಆಸ್ಪತ್ರೆ ಆವರಣ, ಅನಂತಪುರ ರಸ್ತೆ, ಬಳ್ಳಾರಿ ಇಲ್ಲಿಗೆ ಭೇಟಿ ನೀಡುವ ಮೂಲಕ ಅರ್ಜಿಯನ್ನು ಪಡೆಯಬಹುದಾಗಿದೆ.
ಅರ್ಜಿಯನ್ನು ಭರ್ತಿ ಮಾಡಿ ನಿಗದಿ ಪಡಿಸಿದ ದಾಖಲೆಗಳ ಜರಾಕ್ಸ್ ಪ್ರತಿಯನ್ನು ಕೆಳಗಿನ ವಿಳಾಸಕ್ಕೆ ತಲುಪಿಸಬೇಕು.
ಸಂದರ್ಶನ ಮತ್ತು ದಾಖಲೆಗಳ ಪರಿಶೀಲನೆಗೆ ಬರಬೇಕಾದ ಸ್ಥಳ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ ಸಭಾಂಗಣ, ಬಳ್ಳಾರಿ. ದಾಖಲೆಯ ಪರಿಶೀಲನೆಯ ದಿನಾಂಕ: 04-10-2024 ರಂದು ಬೆಳಿಗ್ಗೆ 09-30 ಗಂಟೆಗೆ.
ಜಿಲ್ಲಾ ಆರ್‌ಸಿಹೆಚ್ ಅಧಿಕಾರಿಗಳ ಕಚೇರಿಯ ಸೂಚನಾ ಫಲಕದಲ್ಲಿ ಅರ್ಜಿದಾರದ ತಾತ್ಕಾಲಿಕ ಅರ್ಹತಾ ಪಟ್ಟಿಯನ್ನು ಪ್ರಕಟಿಸಲಾಗುವುದು. ಒಂದು ವೇಳೆ ಯಾವುದೇ ಅಭ್ಯರ್ಥಿಗಳ ಆಕ್ಷೇಪ ಇದ್ದಲ್ಲಿ 23 ಅಕ್ಟೋಬರ್ ಸಂಜೆ 5 ಗಂಟೆಯ ಒಳಗೆ ಸಲ್ಲಿಸತಕ್ಕದ್ದು.