ಮೈಸೂರಿನಲ್ಲಿರುವ ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆ ಯು ಖಾಲಿ ಇರುವ ಪ್ರೊಫೆಸರ್, ಅಸೋಸಿಯೇಟ್ ಪ್ರೊಫೆಸರ್, ಅಸಿಸ್ಟಂಟ್ ಪ್ರೊಫೆಸರ್ ಹುದ್ದೆಗಳಿಗೆ ನೇಮಕಾತಿಯನ್ನು ಕರೆದಿದೆ. ಅಕ್ಟೋಬರ್ 17 ಕೊನೆಯ ದಿನಾಂಕವಾಗಿದ್ದು ಅಭ್ಯರ್ಥಿಗಳನ್ನು ನೇರವಾಗಿ ನೇಮಕ ಮಾಡಲಾಗುತ್ತದೆ.
ಹುದ್ದೆಗಳ ವಿವರ :
- ಪ್ರೊಫೆಸರ್ (ಆಡಿಯೋಲಜಿ) – 1
- ಪ್ರೊಫೆಸರ್ (ಸ್ಪೀಚ್ / ಲಾಂಗ್ವೇಜ್. ಪೇಥಾಲಜಿ/ ಸ್ಪೀಚ್ ಸೈನ್ಸ್) – 1
3.ಪ್ರೊಫೆಸರ್ (ಇಎನ್‌ಟಿ) – 1
- ಅಸೋಸಿಯೇಟ್ ಪ್ರೊಫೆಸರ್ (ಸ್ಪೀಚ್ / ಲಾಂಗ್ವೇಜ್. ಪೇಥಾಲಜಿ/ ಸ್ಪೀಚ್ ಸೈನ್ಸ್) – 2
- ಅಸೋಸಿಯೇಟ್ ಪ್ರೊಫೆಸರ್ (ಆಡಿಯೋಲಜಿ) – 2
- ಅಸೋಸಿಯೇಟ್ ಪ್ರೊಫೆಸರ್ (ಇಲೆಕ್ಟ್ರಾನಿಕ್ಸ್ ಅಂಡ್ ಅಕೌಸ್ಟಿಕ್ಸ್) – 1
- ಅಸೋಸಿಯೇಟ್ ಪ್ರೊಫೆಸರ್ (ವಿಶೇಷ ಶಿಕ್ಷಣ) – 1
8.ಅಸೋಸಿಯೇಟ್ ಪ್ರೊಫೆಸರ್ (ಕ್ಲಿನಿಕಲ್ ಸೈಕಾಲಜಿ) – 1
- ಅಸೋಸಿಯೇಟ್ ಪ್ರೊಫೆಸರ್ (ಸ್ಪೀಚ್ ಸೈನ್ಸಸ್)- 3
- ಅಸೋಸಿಯೇಟ್ ಪ್ರೊಫೆಸರ್ (ಇಎನ್‌ಟಿ) – 1
- ಅಸೋಸಿಯೇಟ್ ಪ್ರೊಫೆಸರ್ (ಲಾಂಗ್ವೇಜ್ ಪೆಥಾಲಜಿ) – 1
- ಅಸೋಸಿಯೇಟ್ ಪ್ರೊಫೆಸರ್ (ಇಲೆಕ್ಟ್ರಾನಿಕ್ಸ್) – 1
13.ಅಸಿಸ್ಟಂಟ್ ಪ್ರೊಫೆಸರ್ (ಇಎನ್‌ಟಿ) – 1
- ಅಸಿಸ್ಟಂಟ್ ಪ್ರೊಫೆಸರ್ (ಕ್ಲಿನಿಕಲ್ ಸೈಕಾಲಜಿ) – 1
- ಅಸಿಸ್ಟಂಟ್ ಪ್ರೊಫೆಸರ್ (ಇಲೆಕ್ಟ್ರಾನಿಕ್ಸ್) –
16.ಅಸಿಸ್ಟಂಟ್ ಪ್ರೊಫೆಸರ್ (ಸ್ಪೀಚ್ ಸೈನ್ಸಸ್) – 2
17.ಅಸಿಸ್ಟಂಟ್ ಪ್ರೊಫೆಸರ್ (ಲಾಂಗ್ವೇಜ್ ಪೆಥಾಲಜಿ)- 1
18.ಅಸಿಸ್ಟಂಟ್ ಪ್ರೊಫೆಸರ್ (ಸ್ಪೀಚ್ / ಲಾಂಗ್ವೇಜ್ ಪೆಥಾಲಜಿ) – 1
ಅರ್ಹತೆಗಳು :
ಎಂಬಿಬಿಎಸ್, ಎಂಎಸ್, ಎಂಡಿ ವಿಷಯವನ್ನು
ಸಂಬಂಧಿತ ವಿಷಯಗಳಲ್ಲಿ ಉತ್ತೀರ್ಣರಾಗಿರಬೇಕು. ಪ್ರೊಪೋಸರ್ ಹುದ್ದೆಗಳಿಗೆ 10 ವರ್ಷ ಬೋಧನೆಯ ಅನುಭವ ಹಾಗೂ ಸಂಶೋಧನ ಅನುಭವ ದ ಜೊತೆಗೆ ಗರಿಷ್ಠ 50 ವರ್ಷದ ಒಳಗಿರಬೇಕು.
ಅಸೋಸಿಯೇಟ್ ಪ್ರೊಫೆಸರ್ ಗೆ PhD ಮುಗಿಸಿ 5 ವರ್ಷಗಳ ಬೋಧನೆಯ ಅನುಭವ ಇರಬೇಕು. ಹಾಗೂ ಗರಿಷ್ಠ 45 ವರ್ಷ ಒಳಗಿರಬೇಕು. ಅಸಿಸ್ಟಂಟ್ ಪ್ರೊಫೆಸರ್ ಗೆ ಎಂ.ಫಿಲ್ ಬಳಿಕ 2 ವರ್ಷ ಅನುಭವ ಹಾಗೂ 40 ವರ್ಷ ವಯಸ್ಸು ಮೀರಬಾರದು. 13, 12, 11 ಹಂತದ ವೇತನವನ್ನು ನೀಡಲಾಗುವುದು ಎಂದು ತಿಳಿಸಲಾಗಿದೆ.
ಅಭ್ಯರ್ಥಿಗಳಿಗೆ 3 ಹಂತಗಳಲ್ಲಿ ವಿವಿಧ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಲಿಖಿತ ಪರೀಕ್ಷೆ ನಡೆಸಿದ ಬಳಿಕ ಬೋಧನಾ ಕೌಶಲ್ಯ, ಹಾಗೂ ಹೆಚ್ಚು ಅಂಕ ಪಡೆದವರು ಜೊತೆಗೆ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.
ಅರ್ಜಿಯನ್ನು ಸಲ್ಲಿಸುವುದು:
www.aiishmysore.in ಗೆ ಭೇಟಿ ನೀಡುವ ಮೂಲಕ ಡೌನ್‌ಲೋಡ್ ಮಾಡಿ. ಬೇರೆ ಬೇರೆ ಹುದ್ದೆಗೆ ಬೇರೆ ಬೇರೆ ಆರ್ಜಿಗಳಿವೆ. ಅರ್ಜಿಯನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ಲಗತ್ತಿಸಿ ಅರ್ಜಿಯ ಮೇಲೆ ಹುದ್ದೆಯ ಹೆಸರನ್ನು ನಮೂದಿಸಿ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು.
ವಿಳಾಸ
The Chief Administrative Officer, O/o the Chief Administrative Officer, All India Institute of Speech and Hearing, Manasagangotri, Mysore – 570006.