ದ್ವಿಚಕ್ರ ವಾಹನ ಕಳವು ತಡೆಯಲು ಕ್ರಮ: ಮಾರಾಟಕ್ಕೂ ಮುನ್ನ ಸುರಕ್ಷಿತ ಪರಿಕರ ಅಳವಡಿಕೆ

Share It

ಬೆಂಗಳೂರು: ದ್ವಿಚಕ್ರ ವಾಹನ ಕಳವು ತಡೆಗಟ್ಟಲು ಮಾರಾಟಕ್ಕೂ ಮುನ್ನ ಸುರಕ್ಷಿತ ಪರಿಕರಗಳನ್ನು ಅಳವಡಿಸುವಂತೆ ಹಂಚಿಕೆದಾರರಿಗೆ ಪತ್ರ ಬರೆಯುವುದಾಗಿ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.

ಬೆಂಗಳೂರಲ್ಲಿ ದ್ವಿಚಕ್ರ ವಾಹನಗಳ ಕಳವು ಹೆಚ್ಚಾಗಿದ್ದು, ಪ್ರತಿ ದಿನ 14ರಿಂದ 16ದ್ವಿಚಕ್ರ ವಾಹನಗಳು ಕಳ್ಳತನವಾಗುತ್ತಿದೆ. ದ್ವಿಚಕ್ರ ವಾಹನ ಕಳ್ಳತನ‌ ಸುಲಭವಾದ್ದರಿಂದ ವಾಹನ ಮಾರಟಕ್ಕೂ ಮೊದಲು ಜಿಪಿಎಸ್, ವ್ಹೀಲ್ ಲಾಕ್, ಹ್ಯಾಂಡಲ್ ಲಾಕ್, ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಆ್ಯಂಟಿ ಥೆಫ್ಟ್ ಮೆಷಸ್೯ ಅಳವಡಿಸುವಂತೆ ಡಿಸ್ಟ್ರಿಬ್ಯೂಟರ್ ಗಳಿಗೆ ಸೂಚಿಸಲಾಗುವುದು ಎಂದು ತಿಳಿದಿದ್ದಾರೆ.

ಬೆಂಗಳೂರು ನಗರರದಲ್ಲೇ ಅಂದಾಜು 80 ಲಕ್ಷ ದ್ವಿಚಕ್ರ ವಾಹನಗಳಿದ್ದು, ಪ್ರತಿ ದಿನ 1,500 ರಿಂದ 2ಸಾವಿರ ದ್ವಿಚಕ್ರ ವಾಹನ ನೋಂದಣಿ ಆಗುತ್ತಿದೆ. 3 ವರ್ಷಗಳಿಂದ ವಿವಿದ ಠಾಣೆ ಗಳಲ್ಲಿ 14,628 ದ್ವಿಚಕ್ರ ವಾಹನ ಕಳವು ಪ್ರಕರಣ ದಾಖಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.


Share It

You May Have Missed

You cannot copy content of this page