ಕೇಂದ್ರ ಸಚಿವ ಜಿತಿನ್ ರಾಮ್ ಮಂಜಿ ಮತ್ತು ಸಂತೋಷ್ ಕುಮಾರ್ ಸುಮನ್ ನೇತ್ರತ್ವದ ಹಿಂದೂಸ್ತಾನಿ ಅವಾಮ್ ಮೋರ್ಚಾ (ಜಾತ್ಯಾತೀತ) ಪಕ್ಷದ ಕರ್ನಾಟಕ ಘಟಕದ ಅಧ್ಯಕ್ಷರಾಗಿ ಡಾ.ಮಾಯಾ ಪ್ರದೀಪ್ ಮತ್ತು ಮುಖ್ಯ ಪ್ರಧಾನ ಕಾರ್ಯದರ್ಶಿಯಾಗಿ ಡಾ.ಆದಿದೇವ್ ಆಯ್ಕೆಯಾಗಿದ್ದಾರೆ.
ಮಾಯಾ ಪ್ರದೀಪ್, ಸಾಮಾಜಿಕ ಕಾರ್ಯಕರ್ತರಾಗಿದ್ದು, ಹಲವಾರು ಸಂಘ-ಸಂಸ್ಥೆಗಳಲ್ಲಿ ಗುರುತಿಸಿಕೊಂಡಿದ್ದಾರೆ ಮತ್ತು ಮಹಿಳಾ ಮತ್ತು ಯುವಕರ ಸಬಲೀಕರಣಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.
ಪಕ್ಷದ ರಾಷ್ಟ್ರೀಯ ಮುಖ್ಯ ಪ್ರಧಾನ ಕಾರ್ಯದರ್ಶಿ ರಾಜೇಶ್ ಕುಮಾರ್ ಪಾಂಡೆ ಮತ್ತು ರಾಷ್ಟ್ರೀಯ ಯುವ ಘಟಕದ ಪ್ರದಾನ ಕಾರ್ಯದರ್ಶಿ ವಿನೋದ್ ಕುಮಾರ್ ರವರ ಸಮ್ಮುಖದಲ್ಲಿ ಡಾ .ಮಾಯಾ ಪ್ರದೀಪ್ ಮತ್ತು ಆದಿ ದೇವ್ ರವರು ಅಧಿಕಾರವನ್ನು ಸ್ವೀಕರಿಸಿದರು.