ಉಪಯುಕ್ತ ಸುದ್ದಿ

SBI ನಲ್ಲಿ 1511 ಸ್ಪೆಷಲಿಸ್ಟ್‌ ಕೇಡರ್‌ ಆಫೀಸರ್ ಹುದ್ದೆಗಳು!

Share It

ಭಾರತದ ಉನ್ನತ ಬ್ಯಾಂಕ್ ಆಗಿರುವ ಎಸ್ ಬಿಐ 1511 ಸ್ಪೆಷಲಿಸ್ಟ್‌ ವರ್ಗದ ಉದ್ಯೋಗಿಗಳನ್ನು ಗುತ್ತಿಗೆಯ ಅಧಾರದಲ್ಲಿ ನೇಮಕಾತಿ ಮಾಡಿಕೊಳ್ಳುತ್ತಿದೆ. ಒಂದೊಳ್ಳೆ ಕೆಲಸ ಹುಡುಕುತಿರುವವರು ಇಂದೇ ಅರ್ಜಿಯನ್ನು ಸಲ್ಲಿಸಿ. ತಾಂತ್ರಿಕ ಪದವಿಯನ್ನು ಪೂರ್ಣಗೊಳಿಸಿದ್ದರೆ ಸಾಕು.

ಮುಖ್ಯವಾಗಿ ಸ್ಪೆಷಲಿಸ್ಟ್‌ ಕೇಡರ್‌ ಆಫೀಸರ್ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲು ಆದೇಶ ಹೊರಡಿಸಿದೆ. ಈ ಹುದ್ದೆಗಳನ್ನು ಪ್ರಾಜೆಕ್ಟ್‌ ಮ್ಯಾನೇಜ್ಮೆಂಟ್ ಮತ್ತು ಡೆಲಿವರಿ, ಇನ್ಫಾರ್ಮೇಷನ್ಸ್‌ ಸೆಕ್ಯೂರಿಟಿ, ಡೆಪ್ಯೂಟಿ ಮ್ಯಾನೇಜರ್ ,ಇನ್ಫ್ರಾ ಸಪೋರ್ಟ್‌ ಅಂಡ್ ಕ್ಲೌಡ್ ಆಪರೇಷನ್ಸ್‌, ಐಟಿ ಆರ್ಕಿಟೆಕ್ಟ್‌, ಹಾಗೂ ಅಸಿಸ್ಟಂಟ್ ಮ್ಯಾನೇಜರ್ ನೆಟ್‌ವರ್ಕ್‌ ಆಪರೇಷನ್ಸ್‌, ವಿಭಾಗದಲ್ಲಿ ಅರ್ಜಿಯನ್ನು ಕರೆಯಲಾಗಿದೆ.

ಒಟ್ಟು ಹುದ್ದೆಗಳ ಪೈಕಿ 789 ಹುದ್ದೆಗಳು ಅಸಿಸ್ಟಂಟ್ ಮ್ಯಾನೇಜರ್ ಹುದ್ದೆಗಳಾಗಿವೆ. ಆಯ್ಕೆಯಾದ ಅಭ್ಯರ್ಥಿಗಳನ್ನು ಮದ್ರಾಸ್ ಮತ್ತು ಇತರ ಶಾಖೆ ಗಳಲ್ಲಿ ನೇಮಕ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 04-10-2024

ಅರ್ಜಿ ಪ್ರಿಂಟ್ ತೆಗೆದುಕೊಳ್ಳಲು ಕೊನೆ ದಿನಾಂಕ: 19-10-2024

ಹುದ್ದೆಗಳ ವಿವರ ಕೆಳಗಿನಂತಿದೆ:

  1. ಡೆಪ್ಯೂಟಿ ಮ್ಯಾನೇಜರ್ (ಸಿಸ್ಟಮ್) – ಪ್ರಾಜೆಕ್ಟ್‌ ಮ್ಯಾನೇಜ್ಮೆಂಟ್ ಮತ್ತು ಡೆಲಿವರಿ : 187
  2. ಡೆಪ್ಯೂಟಿ ಮ್ಯಾನೇಜರ್ (ಸಿಸ್ಟಮ್) – ಇನ್ಫ್ರಾ ಸಪೋರ್ಟ್‌ ಅಂಡ್ ಕ್ಲೌಡ್ ಆಪರೇಷನ್ಸ್‌ : 412
  3. ಡೆಪ್ಯೂಟಿ ಮ್ಯಾನೇಜರ್ (ಸಿಸ್ಟಮ್ಸ್‌ ) – ನೆಟ್‌ವರ್ಕ್‌ ಆಪರೇಷನ್ಸ್‌ : 80
  4. ಡೆಪ್ಯೂಟಿ ಮ್ಯಾನೇಜರ್ (ಸಿಸ್ಟಮ್ಸ್‌) – ಐಟಿ ಆರ್ಕಿಟೆಕ್ಟ್‌ : 27
  5. ಡೆಪ್ಯೂಟಿ ಮ್ಯಾನೇಜರ್ (ಸಿಸ್ಟಮ್ಸ್)- ಇನ್ಫಾರ್ಮೇಷನ್ಸ್‌ ಸೆಕ್ಯೂರಿಟಿ : 07
  6. ಅಸಿಸ್ಟಂಟ್ ಮ್ಯಾನೇಜರ್ (ಸಿಸ್ಟಮ್) : 798
    ಒಟ್ಟು ಹುದ್ದೆಗಳ ಸಂಖ್ಯೆ : 1511

ಅರ್ಹತೆ :

ಮೇಲಿನ ಎಲ್ಲಾ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಈ ಕೆಳಗಿನವುಗಳಲ್ಲಿ ಒಂದನ್ನು ಪೂರ್ಣ ಮಾಡಿದ್ದರೆ ಸಾಕಾಗುತ್ತದೆ.

ಮಾಹಿತಿ ತಂತ್ರಜ್ಞಾನ, ಇಲೆಕ್ಟ್ರಾನಿಕ್ಸ್‌,ಕಂಪ್ಯೂಟರ್ ಸೈನ್ಸ್‌ ಅಂಡ್ ಇಂಜಿನಿಯರಿಂಗ್,ಕಂಪ್ಯೂಟರ್ ಸೈನ್ಸ್‌,ಇಲೆಕ್ಟ್ರಾನಿಕ್ಸ್‌ ಅಂಡ್ ಕಂಮ್ಯುನಿಕೇಷನ್ಸ್‌ ಇಂಜಿನಿಯರಿಂಗ್, ಸಾಫ್ಟ್‌ವೇರ್ ಇಂಜಿನಿಯರಿಂಗ್ ಪದವಿಯನ್ನು ಪೂರ್ಣ ಮಾಡಿರಬೇಕು.

ಎಂಸಿಎ, ಎಂ.ಟೆಕ್, ಎಂಎಸ್ಸಿ ಇದೇ ವಿಭಾಗದಲ್ಲಿ ಪಾಸ್ ಮಾಡಿದ್ದರೆ ಸಾಕು.

ವಯೋ ಮಿತಿ :

21 ರಿಂದ 30 ವರ್ಷದೊಳಗೆ ಇರಬೇಕು.
ಡೆಪ್ಯೂಟಿ ಮ್ಯಾನೇಜರ್ ಹುದ್ದೆಗಳಿಗೆ 25 ರಿಂದ 30 ವರ್ಷ ಇರಬೇಕು.

ಅರ್ಜಿಯ ಶುಲ್ಕ :

ಸಾಮಾನ್ಯ ಮತ್ತು ಹಿಂದುಳಿದ ಅಭ್ಯರ್ಥಿಗಳಿಗೆ 750 ರೂ.
SC,ST, ವಿಶೇಷ ಚೇತನರಿಗೆ ಯಾವುದೇ ಶುಲ್ಕ ಇರುವುದಿಲ್ಲ.
ಶುಲ್ಕವನ್ನು ಆನ್ಲೈನ್ ಅಲ್ಲಿ ಸಲ್ಲಿಸಬಹುದು.

ಅಧಿಸೂಚಿತ ನೋಡಲು ಇಲ್ಲಿ ಕ್ಲಿಕ್ ಮಾಡಿ.
https://sbi.co.in/web/careers

ಅರ್ಜಿಯನ್ನು ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.
https://ibpsonline.ibps.in/sbisco2aug24/


Share It

You cannot copy content of this page