ಸುದ್ದಿ

ಕಟ್ಟಡ ಕಾರ್ಮಿಕರ ಮಕ್ಕಳಿಗೆ ವಿತರಿಸಲು ತಂದಿದ್ದ 101 ಲ್ಯಾಪ್‌ಟಾಪ್ ಕಳ್ಳತನ: 26 ಮಂದಿ ಆರೋಪಿಗಳ ಬಂಧನ

Share It

ಹುಬ್ಬಳ್ಳಿ: ಕಟ್ಟಡ ಕಾರ್ಮಿಕರ ಮಕ್ಕಳಿಗೆ ವಿತರಿಸಲು ತಂದಿದ್ದ 101 ಲ್ಯಾಪ್‌ಟಾಪ್​ಗಳು ಕಳ್ಳತನವಾಗಿರುವ ಘಟನೆ ಹುಬ್ಬಳ್ಳಿ ಕಟ್ಟಡ ಕಾರ್ಮಿಕ ಇಲಾಖೆ ಕಚೇರಿಯಲ್ಲಿ ನಡೆದಿದೆ.

ಈ ಸಂಬಂಧ 26ಮಂದಿ ಆರೋಪಿಗಳನ್ನು ಬಂಧಿಸಿ ಜೊತೆಗೆ ಕಳ್ಳತನವಾಗಿದ್ದ ಲ್ಯಾಪ್ ಟಾಪ್​ಗಳನ್ನು ಹಳೇ ಹುಬ್ಬಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕಾರ್ಮಿಕರ ಮಕ್ಕಳಿಗೆ ವಿತರಣೆಗಾಗಿ ತಂದಿದ್ದ 101 ಲ್ಯಾಪ್ ಟಾಪ್ ಕಳುವಾಗಿದ್ದವು. ಈ ಬಗ್ಗೆ ಕಾರ್ಮಿಕ ಇಲಾಖೆ ಅಸಿಸ್ಟೆಂಟ್ ಕಮಿಷ್​ನರ್ ದೂರು ನೀಡಿದ್ದರು. ಈ ಹಿನ್ನೆಲೆ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಸುರೇಶ ಹುಳ್ಳೂರ ತಂಡ ರಚಿಸಲಾಗಿತ್ತು.

ಸೆಪ್ಟೆಂಬರ್​ನಲ್ಲಿ ಬೆಳಗಾವಿಯಿಂದ ತಂದು ಕಾರ್ಮಿಕ ಇಲಾಖೆಯಲ್ಲಿ ಇಡಲಾಗಿದ್ದು, ಆಗಸ್ಟ್​ನಲ್ಲಿ ಪರಿಶೀಲನೆ ಮಾಡಿದಾಗ ಅವು ಕಳುವಾಗಿದ್ದು ಬೆಳಕಿಗೆ ಬಂದಿದೆ.
ಹಾವೇರಿ ಜಿಲ್ಲೆಯ ಕೂಲಿ ಕಾರ್ಮಿಕರಿಗೆ ನೀಡಲೆಂದು ಸುಮಾರು 55 ಲಕ್ಷ ಮೌಲ್ಯದ ಎಚ್ ಪಿ ಕಂಪನಿಯ ಲ್ಯಾಪ್ ಟಾಪ್​ಗಳಾಗಿದ್ದವು.

ಅನುಮಾನಗೊಂಡು ವಿಚಾರಣೆ ಮಾಡಿದಾಗ ಅಲ್ಲೇ ಕೆಲಸ ಮಾಡುತ್ತಿದ್ದ ದೀಪಕ್ ಮತ್ತು ಕೃಷ್ಣ ಎಂಬುವವರು ಕಳ್ಳತನ ಮಾಡಿರುವುದು ಗೊತ್ತಾಗಿದೆ. ಇಲಾಖೆಯಲ್ಲಿ ಮತ್ಯಾರಾದರೂ ಸಹಾಯ ಮಾಡಿರುವ ಬಗ್ಗೆ ತನಿಖೆ ಮಾಡಿದ್ದೇವೆ.

ಇಬ್ಬರು ಎಸ್​ಡಿಎ ಮತ್ತು ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ 4 ಸಿಬ್ಬಂದಿಗಳು ಕೃತ್ಯ ಮಾಡಿದ್ದರು ಎಂದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ.

101 ಲ್ಯಾಪ್ ಟಾಪ್​ಗಳನ್ನ 6 ತಿಂಗಳಲ್ಲಿ ಕಿಟಕಿಯಿಂದ ಇಳಿದು ಕದ್ದಿದ್ದಾರೆ. ಇಲಾಖೆಯಿಂದ ಮಾರಾಟ ಮಾಡೋಕೆ ಹೇಳಿದ್ದಾರೆ ಎಂದು ಮೊದಲಿಗೆ 4 ಲ್ಯಾಪ್ ಟಾಪ್ ಗಳನ್ನು ಮಾರಾಟ ಮಾಡಿದ್ದಾರೆ. ಇನ್ನುಳಿದ ಸುಮಾರು 16 ಜನ ಲ್ಯಾಪ್ ಟಾಪ್ ಕಳ್ಳತನಕ್ಕೆ ಪ್ರೇರಣೆ ಹಿನ್ನೆಲೆ ವಶಕ್ಕೆ ಪಡೆದಿದ್ದೇವೆ.

ತನಿಖೆಯಲ್ಲಿ 6 ಜನ ಇಲಾಖೆ ಸಿಬ್ಬಂದಿ ಸೇರಿ ಒಟ್ಟು 26 ಜನರನ್ನ ಬಂಧಿಸಲಾಗಿದೆ. 83 ಲ್ಯಾಪ್ ಟಾಪ್, ಎರಡು ಆಟೋ, ಎರಡು ಬೈಕ್ ಹಾಗೂ ಒಂದು ಕಾರನ್ನ ವಶಕ್ಕೆ ಪಡೆದಿದ್ದೇವೆ ಎಂದು ತಿಳಿಸಿದ್ದಾರೆ.


Share It

You cannot copy content of this page