ಮೈಸೂರಿನ ಹೊರವಲಯದಲ್ಲಿ ರೇವ್ ಪಾರ್ಟಿ ಆಯೋಜನೆ: ಪೊಲೀಸರ ದಾಳಿ
ಬೆಂಗಳೂರು: ರೇವ್ ಪಾರ್ಟಿಯ ಘಾಟು ಸಾಂಸ್ಕೃತಿಕ ರಾಜಧಾನಿ ಮೈಸೂರಿಗೂ ಆವರಿಸಿದ್ದು, ನಗರದ ಹೊರವಲಯದಲ್ಲಿ ರೇವ್ ಪಾರ್ಟಿ ಅಡ್ಡೆಯ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.
ಹೆಚ್ಚುವರಿ ಎಸ್.ಪಿ. ನಾಗೇಶ್ ಮತ್ತು ಡಿವೈಎಸ್ ಪಿ ಕರೀಂ ನೇತೃತ್ವದಲ್ಲಿ ದಾಳಿ ನಡೆದಿದ್ದು, ದಾಳಿ ವೇಳೆ ಸುಮಾರು 150 ಕ್ಕೂ ಹೆಚ್ಚು ಯುವಕ- ಯುವತಿಯರನ್ನು ವಶಕ್ಕೆ ಪಡೆಯಲಾಗಿದೆ. ಎಫ್ಎಸ್ ಎಲ್ ತಂಡ ಸ್ಥಳಕ್ಕೆ ಭೇಟಿ ನೀಡಿದ್ದು, ವರದಿಯ ನಂತರ ಸ್ಪಷ್ಟ ಚಿತ್ರಣ ಸಿಗಲಿದೆ.
ಕಾರ್ಯಾಚರಣೆ ಸಂದರ್ಭದಲ್ಲಿ ಪೊಲೀಸರ ಮೇಲೆಯೇ ಕೆಲವರು ದಾಳಿಗೆ ಮುಂದಾಗಿದ್ದರು ಎಂಬ ಮಾಹಿತಿ ಸಿಕ್ಕಿದೆ. ದಾಳಿಯ ಸ್ಥಳದಲ್ಲಿ ಮಧ್ಯದ ಬಾಟಲ್ ಗಳು ಸಿಕ್ಕಿದ್ದು, ಯಾವುದೇ ಡ್ರಗ್ಸ್ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಪಾರ್ಟಿ ಆಯೋಜನೆಗೆ ಪ್ರತಿಯೊಬ್ಬರಿಂದ ಎರಡು ಸಾವಿರ ಸಂಗ್ರಹ ಮಾಡಲಾಗಿತ್ತು. ಇಸ್ರೇಲ್ ನ ರ್ಯಾಪರ್ ಗ್ರೇನ್ ರಿಪ್ಪರ್ ಕರೆಸಿ, ಕಾರ್ಯಕ್ರಮದಲ್ಲಿ ಹಾಡಿಸಲಾಗುತಿತ್ತು ಎಂಬ ಮಾಹಿತಿ ಸಿಕ್ಕಿದೆ. ಪಾರ್ಟಿಯಲ್ಲಿ ಭಾಗವಹಿಸಿದ್ದ 150 ಜನರನ್ನು ವಶಕ್ಕೆ ಪಡೆದಿದ್ದು, ರಕ್ತದ ಮಾದರಿ ಸಂಗ್ರಹಿಸಲಾಗಿದೆ.
ರಕ್ತದ ಮಾದರಿಯ ವರದಿ ಬಂದ ನಂತರವಷ್ಟೇ ಡ್ರಗ್ಸ್ ಬಳಕೆಯ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ಮೈಸೂರು ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ತಿಳಿಸಿದ್ದಾರೆ.


