ಐಪಿಎಲ್ 2025ಕ್ಕೆ ಒಂದು ತಂಡ ಎಷ್ಟು ಆಟಗಾರರನ್ನು ರೀಟೈನ್ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಹಲವಾರು ಗೊಂದಲಗಳು ಸೃಷ್ಟಿಯಾಗಿದ್ದವು. ಆದರೆ ಈಗ ಗೊಂದಲಗಳಿಗೆಲ್ಲ ಇಂದು ತೆರೆ ಬಿದ್ದಿದೆ.
ಹೌದು ಶನಿವಾರ ನೆಡೆಸಿದ ಸಭೆಯ ಬಳಿಕ ಬಿಸಿಸಿಐ ಒಂದು ತಂಡವು ಎಷ್ಟು ಜನ ಆಟಗಾರರನ್ನು ರೀಟೈನ್ ಮಾಡಿಕೊಳ್ಳಬೇಕು ಎಂಬುದನ್ನು ತೀರ್ಮಾನಿಸಿದೆ. ಬಿಸಿಸಿಐ ಹೇಳಿರುವ ಪ್ರಕಾರ ಒಂದು ತಂಡವು ಐದು ಜನ ಆಟಗಾರರನ್ನು ರೀಟೈನ್ ಮಾಡಿಕೊಂಡು ತನ್ನಲ್ಲಿ ಉಳಿಸಿಕೊಳ್ಳಬಹುದು ಎಂದು ಹೇಳಿದೆ.
ಇದಲ್ಲದೆ ಮೆಗಾ ಹರಾಜಿನಲ್ಲಿ ಒಂದು ತಂಡವು ಒಂದು ಆರ್ ಟಿ ಎಮ್( ರೈಟ್ ಟು ಮ್ಯಾಚ್ ) ಕಾರ್ಡ್ ಅನ್ನು ಸಹ ಬಳಸಿ ತಾವು ಉಳಿಸಿಕೊಳ್ಳಲು ಇಚ್ಚಿಸುವ ಆಟಗಾರರನ್ನು ಮರು ಖರೀದಿಸಿ ತಮ್ಮ ತಂಡದಲ್ಲಿ ಉಳಿಸಿಕೊಳ್ಳಬಹುದು. ತಂಡದಲ್ಲಿ ರಿಟೈನ್ ಮಾಡಿಕೊಳ್ಳಬಹುದಾದ ಐದು ಆಟಗಾರರಲ್ಲಿ ಮೂರು ಜನ ಭಾರತೀಯ ಆಟಗಾರರು ಮತ್ತು ಇಬ್ಬರೂ ವಿದೇಶಿ ಆಟಗಾರರನ್ನು ಉಳಿಸಿಕೊಳ್ಳಬಹುದು ಎಂದು ಹೇಳಿದೆ.
ಮೆಗಾ ಹರಾಜು ಡಿಸೆಂಬರ್ ಕೊನೆಯ ವಾರ ಅಥವಾ ಜನವರಿಯ ಮೊದಲ ವಾರದಲ್ಲಿ ನಡೆಯುವ ಸಾಧ್ಯತೆ ಹೆಚ್ಚಿದೆ. ಈಗ ಬಂದಿರುವ ವರದಿಗಳ ಪ್ರಕಾರ ಮೆಗಾ ಹರಾಜು ಕೂಡ ವಿದೇಶದಲ್ಲಿ ನಡೆಯುವ ಸಾಧ್ಯತೆ ಇದೆ.
ಒಟ್ಟಾರೆ ಇಂದು ನಡೆದ ಸಭೆಯಲ್ಲಿ ಬಿಸಿಸಿಐ ಮಹತ್ವ ನಿರ್ಧಾರ ಕೈಗೊಂಡಿದ್ದು ಒಂದು ತಂಡವು ಬರೋಬ್ಬರಿ ಆರು ಜನರ ಆಟಗಾರರನ್ನು ಉಳಿಸಿಕೊಳ್ಳಬಹುದು ಎಂಬ ತೀರ್ಮಾನ ಕೈಗೊಂಡಿದೆ.
ಬಿಸಿ ತೆಗೆದುಕೊಂಡಿರುವ ಈ ತೀರ್ಮಾನ ಕಳೆದ ಬಾರಿ ಪಾಯಿಂಟ್ಸ್ ಟೇಬಲ್ ನ ಕೊನೆಯಲ್ಲಿ ಉಳಿದುಕೊಂಡಿದ್ದ ತಂಡಗಳಿಗೆ ಬೇಸರ ತಂದಿದೆ. ಇನ್ನು ಕಳೆದ ಬಾರಿ ಪ್ಲೇ ಆಫ್ ಗೆ ಕ್ವಾಲಿಫೈ ಆಗಿದ್ದ ತಂಡಗಳು ಈ ತೀರ್ಮಾನದಿಂದ ಸ್ವಲ್ಪ ಖುಷಿ ಪಟ್ಟಿವೆ. ಯಾವೆಲ್ಲ ತಂಡಗಳು ಯಾವೆಲ್ಲ ಆಟಗಾರನನ್ನು ರೀಟೈನ್ ಮಾಡಿಕೊಳ್ಳಲಿವೆ ಎಂದು ಕಾದು ನೋಡಬೇಕಾಗಿದೆ.