ದಾವಣಗೆರೆ: ಬಿಜೆಪಿ ರಾಜ್ಯಾದ್ಯಕ್ಷ ಬಿ.ವೈ ವಿಜಯೇಂದ್ರ ಹಠಾವೋ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದೆ. ಬಿ.ವೈ ವಿಜಯೇಂದ್ರ ವಿರೋಧಿ ಶಾಸಕರು ಹಾಗೂ ನಾಯರು ಪದೇ ಪದೇ ಪ್ರತ್ಯೇಕ ಸಭೆ ಮಾಡುತ್ತಲೇ ಇದ್ದಾರೆ. ಇತ್ತೀಚಿಗೆ ಬೆಳಗಾವಿಯಲ್ಲಿ ಸೀಕ್ರೆಟ್ ಮೀಟಿಂಗ್ ನಡೆದಿತ್ತು, ಇದಾದ ಮೇಲೆ ಕುಮಾರ್ ಬಂಗಾರಪ್ಪ ಹಾಗೇ ಬಿಜೆಪಿ ಉಚ್ಚಾಟಿತ ನಾಯಕ ಕೆ.ಎಸ್ ಈಶ್ವರಪ್ಪ ನಿವಾಸದಲ್ಲಿ ರೆಬೆಲ್ ನಾಯಕರು ಸಭೆ ನಡೆಸಿದ್ದಾರೆ. ಇದೀಗ ಇಂದು (ಸೆ.29) ದಾವಣಗೆರೆಯಲ್ಲಿ ರಹಸ್ಯ ಸಭೆ ನಡೆಸಿದ್ದಾರೆ.
ದಾವಣಗೆರೆ ನಗರದ ಜಿಎಂಐಟಿ ಕಾಲೇಜ್ ಅತಿಥಿ ಗೃಹದಲ್ಲಿ ನಾಯಕರು ಸಭೆ ನಡೆಸಿದ್ದು, ಈ ಸಭೆಯಲ್ಲಿ ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಮಾಜಿ ಸಂಸದರಾದ ಪ್ರತಾಪ್ ಸಿಂಹ, ಜಿ.ಎಂ ಸಿದ್ದೇಶ್ವರ, ಹರಿಹರ ಬಿಜೆಪಿ ಶಾಸಕ ಬಿ.ಪಿ ಹರೀಶ್ ಸೇರಿದಂತೆ ಇತರೆ ರೆಬೆಲ್ ನಾಯಕರು ಇದ್ದರು.