ಕೋಲಾರ: ಕೋಲಾರ ಜಿಲ್ಲಾಸ್ಪತ್ರೆಯ ಅವ್ಯವಸ್ಥೆಯ ಬಗ್ಗೆ ಉಪಲೋಕಾಯುಕ್ತ ನ್ಯಾ.ಬಿ.ವೀರಪ್ಪ ಬೇಸರ ವ್ಯಕ್ತಪಡಿಸಿದ್ದು, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಕೋಲಾರ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ಉಪಲೋಕಾಯುಕ್ತರು, ಅಲ್ಲಿನ ಅವ್ಯವಸ್ಥೆಯನ್ನು ಕಂಡು ಗರಂ ಆದರು. ರೋಗಿಗಳು ತಮಗಾಗುತ್ತಿರುವ ತೊಂದರೆಗಳ ಬಗ್ಗೆ ಉಪಲೋಕಾಯುಕ್ತರ ಮುಂದೆ ಅಳಲು ತೋಡಿಕೊಂಡರು.
ಆಸ್ಪತ್ರೆಯಲ್ಲಿ ರೋಗಿಗಳಿಗೆ ಆಗುತ್ತಿರುವ ಅವ್ಯವಸ್ಥೆಯನ್ನು ಕಣ್ಣಾರೆ ಕಂಡ ವೀರಪ್ಪ ಅವರು, ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಸ್ಥಳದಲ್ಲಿಯೇ ತರಾಟೆಗೆ ತೆಗೆದುಕೊಂಡರು. ಅವ್ಯವಸ್ಥೆಯನ್ನು ಶೀಘ್ರವೇ ಸರಿಪಡಿಸದಿದ್ದರೆ, ಕ್ರಮದ ಎಚ್ಚರಿಕೆ ನೀಡಿದರು.
ಆಸ್ಪತ್ರೆ ಭೇಟಿಗೆ ಮೊದಲು ಉಪಲೋಕಾಯುಕ್ತ ವೀರಪ್ಪ ಅವರು, ಕೋಲಾರದ ನಚಿಕೇತ ಹಾಸ್ಟೆಲ್‌ಗೆ ಬೇಟಿ, ವಿದ್ಯಾರ್ಥಿಧಗಳಿಗೆ ಕೊಡುತ್ತಿರುವ ಊಟ, ಮೊಟ್ಟೆ, ಬಟ್ಟೆ ಮತ್ತು ಪುಸ್ತಕಗಳ ಬಗ್ಗೆ ಮಾಹಿತಿ ಪಡೆದುಕೊಂಡರು.