“ಉತ್ತರ’ ಪೌರುಷಕ್ಕೆ ಬಡಪಾಯಿ ಕಂಡಕ್ಟರ್ ಬಲಿಪಶು: ಬಿಎಂಟಿಸಿ ಕಂಡಕ್ಟರ್‌ಗೆ ಚಾಕು ಇರಿತ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ !

Share It


ಬೆಂಗಳೂರು: ಎಂಟಿಸಿ ಕಂಡಕ್ಟರ್ ಯೋಗೇಶ್ ಗೆ ಚಾಕುವಿನಿಂದ ಇರಿದಿರುವ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಮ್ಯಾನೇಜರ್ ಮೇಲೆ ಹಲ್ಲೆಗೆ ತಂದಿದ್ದ ಚಾಕು ಬಳಿಸಿ, ಕಂಡಕ್ಟರ್ ಮೇಲೆ ಪೌರುಷ ಮೆರೆದಿದ್ದಾನೆ ಎಂದು ಗೊತ್ತಾಗಿದೆ.

ನಗರದ ಐಟಿಪಿಎಲ್ ಸಿಗ್ನಲ್ ಬಳಿ ಉತ್ತರ ಭಾರತ ಮೂಲದ ಹರ್ಷ ಎಂಬಾತ ಕೆ.ಎ. 57. ಎಫ್ 0055 ಸಂಖ್ಯೆಯ ಬಸ್ ಹತ್ತಿ ಬಾಗಿಲಲ್ಲಿ ನಿಂತಿದ್ದ, ಕಂಡಕ್ಟರ್ ಬಾಗಿಲುಬಿಟ್ಟು ಒಳಗೆ ಹೋಗುವಂತೆ ಸೂಚನೆ ನೀಡಿದ್ದರು. ಇದನ್ನೆ ನೆಪವಾಗಿಸಿಕೊಂಡು, ತನ್ನ ಬ್ಯಾಗಿನಲ್ಲಿದ್ದ ಚಾಕು ತೆಗೆದು ಕಂಡಕ್ಟರ್ ಯೋಗೇಶ್ ಹೊಟ್ಟೆಗೆ ಆರೋಪಿ ಇರಿದಿದ್ದಾನೆ.

ತಾನು ಕೆಲಸ ಮಾಡುತ್ತಿದ್ದ ಕಂಪನಿಯ ಮ್ಯಾನೇಜರ್ ಜತೆಗೆ ಕಿರಿಕ್ ಮಾಡಿಕೊಂಡಿದ್ದ ಉತ್ತರ ಕುಮಾರ, ಆತನಿಗೆ ಹಲ್ಲೆ ಮಾಡಲು ಚಾಕು ಮತ್ತು ಸುತ್ತಿಗೆ ತೆಗೆದುಕೊಂಡು ಹೋಗುತ್ತಿದ್ದ. ದಾರಿಯಲ್ಲಿ ಬಸ್ ಕಂಡಕ್ಟರ್ ಒಳಹೋಗುವಂತೆ ಹೇಳಿದ್ದನ್ನೇ ನೆಪವಾಗಿಸಿಕೊಂಡ ಆತನಿಗೆ ಇರಿದಿದ್ದಾನೆ.

ಆರೋಪಿ, ಕಂಕಡಕ್ಟರ್‌ಗೆ ಇರಿಯುತ್ತಿದ್ದಂತೆ ಪ್ರಯಾಣೀಕರೆಲ್ಲ ಚೆಲ್ಲಾಪಿಲ್ಲಿಯಾಗಿ ಓಡಲು ಆರಂಭಿಸಿದ್ದಾರೆ. ಕಂಡಕ್ಟರ್ ಗೆ ಇರಿದ ನಂತರ ಆರೋಪಿ, ಬಸ್‌ನ ಮುಂಭಾಗದ ಗ್ಲಾಸ್ ಅನ್ನು ಕೂಡ ಚಾಕುವಿನಿಂದ ಚುಚ್ಚಿ ಜಖಂಗೊಳಿಸಿದ್ದಾನೆ. ಡ್ರೆöÊವರ್ ಬಸ್ ನಿಲ್ಲಿಸಿ, ಕಂಡಕ್ಟರ್ ಸಹಾಯಕ್ಕೆ ಬರುವ ವೇಳೆಗಾಗಲೇ, ಆತ ಮರ‍್ನಾಲ್ಕು ಬಾರಿ ಕಂಡಕ್ಟರ್‌ಗೆ ಇರಿದಿದ್ದದ್ದು ಬಸ್‌ನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಗಂಭೀರವಗಿ ಗಾಯಗೊಂಡಿರುವ ಕಂಡಕ್ಟರ್ ಯೋಗೇಶ್ ಗೆ ಹತ್ತಿರದಲ್ಲಿಯೇ ಇದ್ದ ವೈದೇಹಿ ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ಕೊಡಲಾಗುತ್ತಿದೆ. ತತಕ್ಷಣಕ್ಕೆ ಚಿಕಿತ್ಸೆ ಸಿಕ್ಕಿದ ಕಾರಣಕ್ಕೆ ಯೋಗೇಶ್ ಸಾವಿನಿಂದ ಪಾರಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.


Share It

You May Have Missed

You cannot copy content of this page