ದೆಹಲಿಯಲ್ಲಿ 2,000 ಕೋಟಿ ಮೌಲ್ಯದ ಮಾಧಕ ವಸ್ತು ವಶ: ಮೂವರ ವಶ
ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಮಾಧಕ ವಸ್ತು ಕಳ್ಳಾಟ ಜಾಲವೊಂದು ಪತ್ತೆಯಾಗಿದ್ದು, ಅವರ ವಹಿವಾಟು ಬೆಚ್ಚಿಬೀಳಿಸುವಂತಿದೆ.
ಮಾಧಕ ವಸ್ತು ಕೊಕೇನ್ ಸರಬಾರು ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಆರೋಪಿಗಳಿಂದ ಸುಮಾರು 2000 ಕೋಟಿ ಮೌಲ್ಯದ 565 ಕೆ.ಜಿ. ತೂಕದ ಕೋಕೇನ್ ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.
ಇತ್ತೀಚೆಗೆ ಗುಜರಾತ್ನ ಬಂದರಗಳ ಮೂಲಕ ಹೆಚ್ಚಿನ ಮಾದಕ ವಸ್ತು ದೇಶಕ್ಕೆ ತಲುಪುತ್ತಿದೆ ಎಂಬ ಆರೋಪ ಕೇಳಿಬಂದಿತ್ತು. ಇದೀಗ ರಾಜಧಾನಿ ದೆಹಲಿಯಲ್ಲಿಯೇ ಇಷ್ಟೊಂದು ದೊಡ್ಡ ಪ್ರಮಾಣದ ಕೊಕೇನ್ ಪತ್ತೆಯಾಗಿರುವುದು ಅನುಮಾನಕ್ಕೆ ಕಾರಣವಾಗಿದೆ.


