ರೈಲ್ವೆಯಿಂದ 13,206 ತಾಂತ್ರಿಕ ಹುದ್ದೆಗಳಿಗೆ ನೇಮಕಾತಿ
ಭಾರತೀಯ ರೈಲ್ವೆ ಇಲಾಖೆಯು ಬೃಹತ್ ಉದ್ಯೋಗಾವಕಾಶವನ್ನು ನೀಡಿದೆ. ಒಟ್ಟು 13,206 ಟೆಕ್ನೀಷಿಯನ್ ಹುದ್ದೆಗಳಿಗೆ ಅರ್ಜಿಯನ್ನು ಕರೆಯಲಾಗಿದೆ. ಒಟ್ಟು 39 ವಿವಿಧ ವಿಭಾಗಗಳಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದ್ದು ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಇಂದೇ ಸಲ್ಲಿಸಬಹುದಾಗಿದೆ. ಹುದ್ದೆಯ ಅರ್ಹತೆ ,ವೇತನ ಮತ್ತು ಅರ್ಜಿಯನ್ನು ಸಲ್ಲಿಸುವ ವಿಧಾನವನ್ನು ಕೆಳಗಿನಂತೆ ನೋಡೋಣ.
ಖಾಲಿ ಇರುವ ತಂತ್ರಜ್ಞ ಹುದ್ದೆಗಳ ಶ್ರೇಣಿ 3 ರಲ್ಲಿ 13,206 ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಸ್ವೀಕಾರ ಮಾಡಲಾಗುತ್ತಿದೆ. ಶ್ರೇಣಿ 3 ಇರುವ 39 ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸುವುದರ ಜೊತೆ ಶ್ರೇಣಿ 2 ರಲ್ಲಿ ಈಗಾಗಲೇ ಅರ್ಜಿಯನ್ನು ಸಲ್ಲಿಸಿರುವವರು ಹೆಚ್ಚುವರಿಯಾಗಿ ಯಾವುದೇ ಶುಲ್ಕವನ್ನು ನೀಡದೆ ಅರ್ಜಿಯನ್ನು ಸಲ್ಲಿಸಬಹುದು ಮತ್ತು ವರ್ಗಗಳನ್ನು ಬದಲಾಯಿಸಬಹುದು. ಅರ್ಜಿಯನ್ನು ಪುನಃ ಮಾರ್ಪಾಡು ಮಾಡಬಹುದು.
ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ:
16-10-2024
ಮೆಟ್ರಿಕ್ಯೂಲೇಷನ್ ಜೊತೆಗೆ ಐಟಿಐ ಪಾಸ್ ಮಾಡಿರಬೇಕು. ಎನ್‌ಸಿವಿಟಿ ಅಥವಾ ಎಸ್‌ಸಿವಿಟಿ ಪ್ರಮಾಣ ಪತ್ರ ಪಡೆದಿರಬೇಕು.
ಅರ್ಜಿಯ ಶುಲ್ಕ:
ಸಾಮಾನ್ಯ ಅಭ್ಯರ್ಥಿಗೆ 500 ರೂ. ಒಬಿಸಿ ಗೆ 400 ರೂ. SC,ST ಅಭ್ಯರ್ಥಿಗಳಿಗೆ 250 ರೂ.
ಆರಂಭಿಕ ವೇತನ :
ತಾಂತ್ರಿಕ ಗ್ರೇಡ್ 1 – 29,200
ತಾಂತ್ರಿಕ ಗ್ರೇಡ್ 3- 19,000
ಅರ್ಜಿಯನ್ನು ಸಲ್ಲಿಸುವ ವಿಧಾನ :
- ಕನ್ನಡದ ಅಭ್ಯರ್ಥಿಗಳು ಈ ವಿಳಾಸ https://www.rrbbnc.gov.in/ ಕ್ಕೆ ಭೇಟಿ ನೀಡಿ.
- ಬಳಿಕ ಮುಖಪುಟದಲ್ಲಿ ‘CEN 02/2024 – Technician Categories Detailed CEN NEW’ ಮುಂದೆ ತಿದ್ದುಪಡಿ ಇಂಗ್ಲಿಷ್, ಹಿಂದಿ ನೋಟಿಫಿಕೇಶನ್ ಇರುತ್ತದೆ. ಅದನ್ನು ಕ್ಲಿಕ್ ಮಾಡಿ ಓದಿಕೊಳ್ಳಿ.
- ಅದರ ಕೆಳಗಡೆ ‘ Click to Submit Online Application’ ಕ್ಲಿಕ್ ಮಾಡಿ. ಬೇರೊಂದು ಪುಟ ತೆರೆಯುತ್ತದೆ.
- ಓಪನದ ಆದ ಪುಟದಲ್ಲಿ ‘Apply’ ಎಂದಿರುವಲ್ಲಿ ಕ್ಲಿಕ್ ಮಾಡಿ.
- ಆಯ್ಕೆಗಳ ಪೈಕಿ ‘Create An Account’ ಎಂದಿರುವಲ್ಲಿ ಕ್ಲಿಕ್ ಮಾಡಿ.
- ಕೇಳಲಾಗುವ ಮಾಹಿತಿಗಳನ್ನು ಪೂರ್ಣಗೊಳಿಸಿ ಖಾತೆಯನ್ನು ತೆರೆಯಿರಿ.
- ಬಳಿಕ ವೈಯಕ್ತಿಕ ಮಾಹಿತಿ, ಶೈಕ್ಷಣಿಕ ಮಾಹಿತಿ, ಮೀಸಲಾತಿ ಮಾಹಿತಿ ಹಾಗೂ ದಾಖಲೆಗಳನ್ನು ನೀಡಿ.
8 ಟೈಪಿಸಿ ಹಾಗೂ ದಾಖಲೆಗಳ ಸಾಫ್ಟ್ ಕಾಪಿಯನ್ನು ಅಪ್‌ಲೋಡ್ ಮಾಡಿ. ಅರ್ಜಿಯನ್ನು ಹಾಕಿ. - ಅರ್ಜಿ ಶುಲ್ಕವನ್ನು ಪಾವತಿಸಿ.
- ಅರ್ಜಿಯನ್ನು ಪ್ರಿಂಟ್ ತೆಗೆದುಕೊಳ್ಳಿ.


