ಮನೆಗಳ್ಳನ ಬಂಧನ:7.8 ಲಕ್ಷ ಮೌಲ್ಯದ ವಸ್ತುಗಳು ವಶ
ಬೆಳಗಾವಿ: ಮಾರಿಹಾಳ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿ ಮನೆಗಳಲ್ಲಿ ಕಳ್ಳತನ ಮಾಡಿದ ಪ್ರಕರಣಗಳಿಗೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನನ್ನು ಬಂಧಿಸಿ ಸುಮಾರು 7.80 ಲಕ್ಷ ₹ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬೆಳಗಾವಿ ತಾಲೂಕು ಚಂದೂರು ಗ್ರಾಮದ ಬಸಪ್ಪ ಮಾರುತಿ ಕರಕಾಳಿ ಬಂದಿದ್ದ. ಈತ ಮೋದಗಾ, ಹೊನ್ನಿಹಾಳ, ಹುದಲಿ, ಖನಗಾಂವ ಗ್ರಾಮಗಳ ಹಲವು ಮನೆಗಳಲ್ಲಿ ಕಳ್ಳತನ ಮಾಡಿದ್ದ.
ಚಿನ್ನಾಭರಣ ಸೇರಿದಂತೆ ಹಲವು ವಸ್ತುಗಳನ್ನು ದೋಚಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.


