ದುಬೈ : ಶುಕ್ರವಾರ ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಮಹಿಳಾ ಟಿ20 ವಿಶ್ವಕಪ್ ನ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ-ನ್ಯೂಜಿಲ್ಯಾಂಡ್ ವಿರುದ್ಧ 58 ರನ್ ಗಳ ಸೋಲನ್ನು ಅನುಭವಿಸಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ನ್ಯೂಜಿಲೆಂಡ್, ಪರ ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ಸೂಜಿ ಬೀಟ್ಸ್ ಮತ್ತು ಜಾರ್ಜಿಯಾ ಪ್ಲೀಮ್ಮರ್ ಪವರ್ ಪ್ಲೇನಲ್ಲಿ ಟೀಮ್ ಇಂಡಿಯಾ ಬೌಲರ್ ಗಳನ್ನು ಮನಬಂದಂತೆ ದಂಡಿಸಿ 6 ಓವರ್ ಗಳಲ್ಲಿ 62 ರನ್ಗಳನ್ನು ಚಚ್ಚಿದರು.
ಬಳಿಕ ಕಣಕ್ಕಿಳಿದ ನಾಯಕಿ ಸೋಫಿ ಡಿವೈನ್ 36 ಬಾಲ್ ಗಳಲ್ಲಿ 7 ಬೌಂಡರಿ ಸಹಿತ 57 ಸಿಡಿಸಿ ತನ್ನ ಅಮೋಘ ಅರ್ಧ ಶತಕದೊಂದಿಗೆ ನ್ಯೂಜಿಲೆಂಡ್ 160 ರ ಗಡಿದಾಟಲು ಸಹಕರಿಸಿದರು. ಬಳಿಕ ನ್ಯೂಜಿಲ್ಯಾಂಡ್ 20 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು ಭಾರತಕ್ಕೆ 161 ಗಳ ಟಾರ್ಗೆಟ್ ನೀಡಿತು.
ಟೀಮ್ ಇಂಡಿಯಾ ಪರ ಬೌಲ್ ಮಾಡಿದ ರೇಣುಕಾ ಸಿಂಗ್ ಠಾಕೂರ್ 2 ವಿಕೆಟ್, ಅರುಂಧತಿ ರೆಡ್ಡಿ ಮತ್ತು ಆಶಾ ಶೋಭನ ತಲಾ ಒಂದು ವಿಕೆಟ್ ಪಡೆದರು. ಟೀಮ್ ಇಂಡಿಯಾ, ಬೌಲಿಂಗ್ ನಲ್ಲಿ ತಾನಂದುಕೊಂಡಂತೆ ಪ್ರದರ್ಶನ ನೀಡಲು ಆಗಲಿಲ್ಲ.
ಎರಡನೇ ಇನ್ನಿಂಗ್ಸ್ ನಲ್ಲಿ ಟಾರ್ಗೆಟನ್ನು ಬೆನ್ನತ್ತಲು ಬಂದ ಟೀಮ್ ಇಂಡಿಯಾದ ಬ್ಯಾಟರ್ ಗಳಿಗೆ ಎಡನ್ ಕಾರ್ಸನ್ ಶಫಾಲಿ ವರ್ಮಾ ಅವರ ವಿಕೆಟ್ ಕೀಳುವುದರ ಮೂಲಕ ಆಘಾತ ನೀಡಿದರು. ಬಳಿಕ ಸ್ಮಿತಿ ಮಂದನಾ 12, ನಾಯಕಿ ಹರ್ಮನ್ ಪ್ರೀತ್ ಕೌರ್ 15, ಜಮೀಮ 15, ರಿಚಾ ಗೊಶ್ 12, ಟೀಮ್ ಇಂಡಿಯಾ ಯಾವ ಬ್ಯಾಟರ್ ಗಳು ಸಹ 20 ಗಡಿ ದಾಟದೆ ಸೋಲನ್ನ ಅನುಭವಿಸಬೇಕಾಯಿತು.
ನ್ಯೂಜಿಲೆಂಡ್ ಪರ ಬೌಲಿಂಗ್ ಮಾಡಿದ ರಸ್ಮರಿ ಮೈರ್ 4 ವಿಕೆಟ್ ಮತ್ತು ಲೀಯ ತಹುಹೂ 3 ವಿಕೆಟ್ ಪಡೆದು ಮಿಂಚಿದರು. ಬ್ಯಾಟಿಂಗ್, ಬೌಲಿಂಗ್, ಫೀಲಿಂಗ್ ಮೂರು ಭಾಗದಲ್ಲೂ ವಿಫಲಗೊಂಡ ಟೀಮ್ ಇಂಡಿಯಾದ ಆಟಗಾರರು ವಿಶ್ವ ಕಪ್ ನ ಮೊದಲ ಪಂದ್ಯದಲ್ಲಿ ಸೋತು ಮುಖಭಂಗ ಅನುಭವಿಸಬೇಕಾಯಿತು.
ಶಿವರಾಜು ವೈ. ಪಿ
ಎಲೆರಾಂಪುರ