ಉಪಯುಕ್ತ ಸುದ್ದಿ

ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರಾಗಲು ಬಯಸ್ತೀರಾ? ಬಾಗಲಕೋಟೆ ಅವರಿಗೆ ಅವಕಾಶ !

Share It

ಶಿಕ್ಷಕ ವೃತ್ತಿಯನ್ನು ಮಾಡಲು ಇಷ್ಟ ಪಡುವವರಿಗೆ ಒಂದೊಳ್ಳೆ ಅವಕಾಶ. ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ವಿವಿಧ ವಿಷಯಗಳ ಉಪನ್ಯಾಸಕರನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಅರ್ಹತೆ ಮತ್ತು ಯಾವ ಯಾವ ವಿಷಯ ಎಂಬುದನ್ನು ಈ ಕೆಳಗಿನಂತೆ ನೋಡೋಣ ಬನ್ನಿ.

ಸಂಘಮೇಶ್ವರ ವಿದ್ಯಾವರ್ಧಕ ಸಂಸ್ಥೆಯ ಅನುದಾನಿತ ಸಂಗಮೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜು, ಅಮೀನಗಡ, ಕಾಲೇಜಿನಲ್ಲಿ ಉಪನ್ಯಾಸಕ ವೃತ್ತಿಗೆ ಅವಕಾಶವಿದ್ದು ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ) ಆದೇಶವನ್ನು ಹೊರಡಿಸಿದೆ.

ಕನ್ನಡ ಮತ್ತು ಇತಿಹಾಸ ವಿಷಯದ ಹುದ್ದೆಗಳು ಖಾಲಿ ಇದ್ದು ಕ್ಯಾಟಗಾರಿ ಆಧಾರದಲ್ಲಿ ನೇಮಕಾತಿಯನ್ನು ಮಾಡಿಕೊಳ್ಳಲಾಗುತ್ತದೆ. ಇತಿಹಾಸ ವಿಷಯಕ್ಕೆ ಪರಿಶಿಷ್ಟ ಜಾತಿ ಹಾಗೂ ಕನ್ನಡ ವಿಷಯಕ್ಕೆ ಸಾಮಾನ್ಯ ವರ್ಗದ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುತ್ತದೆ. ಸರ್ಕಾರದ ನಿಯಮದಂತೆ ಅಭ್ಯರ್ಥಿಯ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

ಅರ್ಹತೆ :

ಕನ್ನಡ ಮತ್ತು ಇತಿಹಾಸ ವಿಷಯದಲ್ಲಿ ಸ್ನಾತಕೋತ್ತರ ಪದವಿ, ಪದವಿ ಜೊತೆಗೆ ಎಂ. ಇಡಿ ಮುಗಿಸಿರಬೇಕು. ಎನ್‌ಇಟಿ, ಎಸ್‌ಎಲ್‌ಇಟಿ ಪಡೆದಿರುವ ಮತ್ತು ಕಾರ್ಯ ಅನುಭವ ಇರುವವರಿಗೆ ಮೊದಲ ಆದ್ಯತೆ ನೀಡಲಾಗುವುದು.

ಅಭ್ಯರ್ಥಿಗಳು ಅರ್ಜಿಯನ್ನು ಕೈ ಬರಹದಲ್ಲಿ ತುಂಬಿ ಅಗತ್ಯ ದಾಖಾಲೆಗಳಾದ ಎಸ್.ಎಸ್.ಎಲ್.ಸಿ. ವರ್ಗಾವಣೆ ಪ್ರಮಾಣಪತ್ರ ಮತ್ತು ಅಂಕಪಟ್ಟಿ, ಪಿಯುಸಿ ಅಂಕಪಟ್ಟಿ, ಪದವಿ ಅಂಕಪಟ್ಟಿ, ಬಿ.ಎಡ್. ಅಂಕಪಟ್ಟಿ, ಸ್ನಾತಕೋತ್ತರ ಅಂಕಪಟ್ಟಿ, ಪಾಸಿಂಗ್ ಸರ್ಟಿಫಿಕೇಟ್ ಮತ್ತು ಜಾತಿ ಪ್ರಮಾಣ ಪತ್ರ ದೃಢೀಕರಿಸಿ ದಾಖಲೆಗಳನ್ನು ದಿನಾಂಕ 04-10-2024 ರಿಂದ 21 ದಿನಗಳೊಳಗೆ ಕೆಳಗೆ ನೀಡಲಾದ ವಿಳಾಸಕ್ಕೆ ಕಳುಹಿಸಿ ಕೊಡುವುದು. ಹಾಗೂ ಒಂದು ಪ್ರತಿಯನ್ನು ಮಾನ್ಯ ಉಪನಿರ್ದೇಶಕರು ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ) ಬಾಗಲಕೋಟೆ ಇವರಿಗೆ ಸಲ್ಲಿಸತಕ್ಕದ್ದು. ಅರ್ಜಿಯ ಲಕೋಟೆಯ ಮೇಲೆ ಯಾವ ವಿಷಯದ ಹುದ್ದೆಗೆ ಎಂದು ನಮೂದಿಸಬೇಕು.

ಅರ್ಜಿ ಶುಲ್ಕ:

ಸಾಮಾನ್ಯ ವರ್ಗದ ಅಭ್ಯರ್ಥಿಗಳು 1000 ರೂಪಾಯಿ ಹಾಗೂ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳು 500 ರುಪಾಯಿಯನ್ನು ಡಿಡಿ ಮೂಲಕ ಪಾವತಿ ಮಾಡಬೇಕು. ಡಿಡಿ ಕಟ್ಟುವ ವಿಳಾಸ, ಅಧ್ಯಕ್ಷರು, ಸಂಗಮೇಶ್ವರ ವಿದ್ಯಾವರ್ಧಕ ಸಂಘ, ಅಮೀನಗಡ . ಸೂಚನೆ: ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ ಡಿಡಿ ಕಟ್ಟುವುದು.

ಅರ್ಜಿಯನ್ನು ಸಲ್ಲಿಸಬೇಕಾದ ವಿಳಾಸ :

ಅಧ್ಯಕ್ಷರು ಸಂಗಮೇಶ್ವರ ವಿದ್ಯಾವರ್ಧಕ ಸಂಘ ಅಮೀನಗಡ-587112, ತಾ- ಹುನಗುಂದ, ಜಿ-ಬಾಗಲಕೋಟೆ. ವಿಳಾಸಕ್ಕೆ ಸಲ್ಲಿಸತಕ್ಕದ್ದು.

ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ 24-10-2024 , ಸಂದರ್ಶನದ ದಿನಾಂಕ ತಿಳಿಸಲಾಗುವುದು.

ಅರ್ಜಿಯನ್ನು ಆಫ್ ಲೈನ್ ಮೂಲಕವೇ ಸಲ್ಲಿಸತಕ್ಕದ್ದು.


Share It

You cannot copy content of this page