ಬೆಂಗಳೂರು: ಹರಿಯಾಣ ಮತ್ತು ಜಮ್ಮುವಿನ ಚುನಾವಣೆ ಮತದಾನ ಪ್ರಕ್ರಿಯೆ ಪೂರ್ಣಗೊಂಡಿದ್ದು, ಬಹುತೇಕ ಸಮೀಕ್ಷೆಗಳು ಹರಿಯಾಣ ಕಾಂಗ್ರೆಸ್ ಪಾಲಾಗಲಿದೆ ಎಂದರೆ, ಜಮ್ಮುವಿನಲ್ಲಿ ಬಿಜೆಪಿ ಅಧಿಕಾರ ಪಡೆಯಲಿವೆ ಎನ್ನುತ್ತಿವೆ.
ಹರಿಯಾಣದಲ್ಲಿ ದೈನಿಕ್ ಭಾಸ್ಕರ್, ಮಾಟ್ರಿಜ್, ದತ್ತಾಂಶ್, ರೆಡ್ ಮೈಕ್, ಧ್ರುವ ಸಂಸ್ಥೆಗಳು ನಡೆಸಿರುವ ಸಮೀಕ್ಷೆಗಳೆಲ್ಲವೂ ಕಾಂಗ್ರೆಸ್ ಗೆ ಬಹುಮತ ಸಿಗಲಿವೆ ಎಂದು ಹೇಳುತ್ತಿವೆ.
90 ಸ್ಥಾನಗಳ ಬಲಾಬಲದ ಹರಿಯಾಣದ ವಿಧಾನಸಭೆಯಲ್ಲಿ ಕಾಂಗ್ರೆಸ್ 55 ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಲಿದೆ ಎಂದು ಹೇಳಲಾಗಿದೆ. ಮಾಟ್ರಿಜ್ ಸಮೀಕ್ಷೆಯ ಪ್ರಕಾರ 55-62 ಸ್ಥಾನಗಳನ್ನು ಕಾಂಗ್ರೆಸ್ ನಡೆಯಲಿದೆ.
ದೈನಿಕ್ ಭಾಸ್ಕರ್ ಕೂಡ 56 ಸ್ಥಾನಗಳನ್ನು ಕಾಂಗ್ರೆಸ್ ಗೆಲ್ಲಲಿದೆ ಎಂದು ಹೇಳಿದ್ದು, ಬಿಜೆಪಿ 19 ರಿಂದ 21 ಸ್ಥಾನಗಳಲ್ಲಿ ಮಾತ್ರವೇ ಗೆಲುವು ಸಾಧಿಸಲಿದೆ ಎಂದು ಸಮೀಕ್ಷೆಗಳು ತಿಳಿಸಿವೆ.