ಬೆಂಗಳೂರು: ಗೋವಾದಲ್ಲಿ ಬೋಟ್ ದುರಂತ ಸಂಭವಿಸಿ, 23 ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದು, 74 ಜನರು ಕಾಣೆಯಾಗಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತಿತ್ತು.
ಆದರೆ, ಈ ಸುದ್ದಿ ಸುಳ್ಳು ಎಂದು ಹೇಳಲಾಗಿದ್ದು, ಗೋವಾದಲ್ಲಿ ಇಂತಹ ಯಾವುದೇ ಘಟನೆಯೇ ನಡೆದಿಲ್ಲ ಎಂದು ಗೋವಾ ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಬೋಟ್ ಮುಳುಗುವ ವಿಡಿಯೋ ವೈರಲ್ ಆಗಿದ್ದು, ಬೋಟ್ ಮಾಲೀಕನ ದುರಾಸೆ ಹಾಗೂ ಅತಿ ಆತ್ಮವಿಶ್ವಾಸದಿಂದ ಬೋಟ್ ಮಗುಚಿಬಿದ್ದಿದೆ. 24 ಜನರನ್ನು ಜೀವಂತವಾಗಿ ರಕ್ಷಣೆ ಮಾಡಲಾಗಿದೆ ಎಂದು ಬರೆಯಲಾಗಿತ್ತು.
ಎಕ್ಸ್ ಖಾತೆಯಲ್ಲಿ @Sangha2Bs ಎಂಬುವವರು, ವಿಡಿಯೋ ಹಂಚಿಕೊಂಡು ಈ ಮಾಹಿತಿಯನ್ನು ಬರೆದಿದ್ದರು. ಈ ವಿಡಿಯೋವನ್ನು ಲಕ್ಷಾಂತರ ಜನ ಶೇರ್ ಮಾಡುವ ಜತೆಗೆ, ವಾಟ್ಸಾಪ್ ಮೂಲಕವೂ ಶೇರ್ ಆಗಿತ್ತು.
ಈ ಕುರಿತು ಗೋವಾ ಪೊಲೀಸರು ಸ್ಪಷ್ಟನೆ ನೀಡಿದ್ದು, ಈ ವಿಡಿಯೋ ಗೋವಾದ್ದಲ್ಲ, ಈ ಘಟನೆ ಆಫ್ರಿಕಾದ ಕಾಂಗೋದ ಗೋಮಾದಲ್ಲಿ ನಡೆದ ಘಟನೆ ಎಂದು ಸ್ಪಷ್ಟಪಡಿಸಿದ್ದಾರೆ.