ಬೆಂಗಳೂರು: ಕಾಂಗ್ರೆಸ್ ನಲ್ಲಿ ನಲವತ್ತು ವರ್ಷದ ದುಡಿಮೆಯ ನಂತರವೂ ನನಗೆ ಅನ್ಯಾಯವಾಗಿತ್ತು, ಆದರೆ, ಬಿಜೆಪಿ ನನಗೆ ಸೂಕ್ತ ಸ್ಥಾನಮಾನ ನೀಡಿದೆ. ಈ ಸ್ಥಾನಮಾನ ಕೂಡ ನಾನು ಬೇಡಿ ಪಡೆದಿದ್ದಲ್ಲ ಎಂದು ಛಲವಾದಿ ನಾರಾಯಣಸ್ವಾಮಿ ಹೇಳಿದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಪದವೀಧರರ ಸಂಘದಿಂದ ಹಮ್ಮಿಕೊಂಡಿದ್ದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಕಾಂಗ್ರೆಸ್ ದಲಿತರನ್ನು ಸಿಎಂ ಮಾಡಿ ಎಂದು ಬೇಡಿದರೂ ಮಾಡುತ್ತಿಲ್ಲ, ಅನಿವಾರ್ಯವಾಗಿ ಪರಮೇಶ್ವರ್ ಅವರನ್ನು ಒಮ್ಮೆ ಡಿಸಿಎಂ ಮಾಡಿದ್ದರು ಎಂದು ಲೇವಡಿ ಮಾಡಿದರು.
ಬಿಜೆಪಿ, ದಲಿತರನ್ನು ಡಿಸಿಎಂ ಮಾಡಲು ಮೀನಾಮೇಷ ಎಣಿಸಲೇ ಇಲ್ಲ, ಕಾರಜೋಳ ಅವರನ್ನು ಡಿಸಿಎಂ ಮಾಡಿದರು. ಅಧಿಕಾರದ ಜತೆಯಲ್ಲಿ ಬೆಳೆಯಬೇಕು ಎಂದು ತೀರ್ಮಾನಿಸೋಣ, ಬಿಜೆಪಿ ಕೂಡ ದಲಿತರ ಪಾರ್ಟಿಯನ್ನಾಗಿ ಮಾಡೋಣ ಎಂದು ಕರೆ ನೀಡಿದರು.