ಯಾವುದೇ ಲಿಖಿತ ಪರೀಕ್ಷೆ ಇಲ್ಲದೆ ನೇರವಾಗಿ ನೇಮಕಾತಿಯನ್ನು ಬಯಸುತ್ತೀರ! ಹೌದು ಇಎಸ್ಐಸಿ ಯ ಕಲಬುರ್ಗಿ ಯಲ್ಲಿ ಹಾಸ್ಪಿಟಲ್ ಮತ್ತು ಕಾಲೇಜಿನಲ್ಲಿ ಖಾಲಿ ಇರುವ ಸೀನಿಯರ್ ರೆಸಿಡೆಂಟ್ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಇಲಾಖೆ ಅಧಿಸೂಚಿ ಹೊರಡಿಸಿದೆ. ನೇರ ಸಂದರ್ಶನದ ಮೂಲಕವೇ ಅಭ್ಯರ್ಥಿಯ ಆಯ್ಕೆ ನಡೆಯಲಿದೆ. ಅರ್ಹತೆ ಮತ್ತು ಇತರ ಮಾಹಿತಿ ಕೆಳಗಿನಂತೆ ತಿಳಿಯೋಣ ಬನ್ನಿ.
ಅಭ್ಯರ್ಥಿಗಳು 14-10-2024 ಬೆಳಗ್ಗೆ 9 ರಿಂದ 10 ಗಂಟೆಯ ವರೆಗೆ ನೇರವಾಗಿ ಸ್ಥಳದಲ್ಲೇ ನೋಂದಣಿಯನ್ನು ಮಾಡಿಕೊಳ್ಳಬಹುದಾಗಿದೆ. ಅರ್ಜಿ ನಮೂನೆಯನ್ನು ಪ್ರಿಂಟ್ ಪಡೆದು ಭರ್ತಿ ಮಾಡಿ ಸಂದರ್ಶನದ ದಿನ ತೆಗೆದುಕೊಂಡು ಬರಬೇಕು ಎಂದು ತಿಳಿಸಿದೆ.
ಅರ್ಜಿಯೊಂದಿಗೆ ಲಗತ್ತಿಸಬೇಕಾದ ಪ್ರಮುಖ ದಾಖಲೆಗಳು:
ಎಸ್ಎಸ್ಎಲ್ಸಿ ಅಥವಾ ಮೆಟ್ರಿಕ್ ನ ಪ್ರಮಾಣ ಪತ್ರ
ಎಂಬಿಬಿಎಸ್ ಪ್ರಮಾಣ ಪತ್ರ
ಪಿಜಿ ಅಥವಾ ಡಿಎನ್ಬಿ ಪ್ರಮಾಣ ಪತ್ರ.
ಕರ್ನಾಟಕ ರಾಜ್ಯ ವೈದ್ಯಕೀಯ ಮಂಡಳಿಯಲ್ಲಿ ರಿಜಿಸ್ಟ್ರೇಷನ್ ಪಡೆದ ಪ್ರಮಾಣಪತ್ರ.
ಜಾತಿ ಪ್ರಮಾಣ ಪತ್ರ.
ಆಧಾರ್ ಕಾರ್ಡ್.
ಪಾಸ್ಪೋರ್ಟ್ ಅಳತೆಯ ಭಾವಚಿತ್ರ.
ಅನುಭವದ ದಾಖಲೆಗಳು.
ಅರ್ಜಿ ಶುಲ್ಕ:
ಎಲ್ಲ ಅಭ್ಯರ್ಥಿಗಳಿಗೂ 300 ರೂ ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿದೆ. ಶುಲ್ಕವನ್ನು ಈ ವಿಳಾಸಕ್ಕೆ ಕಟ್ಟಬೇಕು. ಜೊತೆಗೆ ಅರ್ಜಿಯ ಜೊತೆ ಡಿಡಿ ಪಾವತಿಯ ರಸೀದಿಯನ್ನು ಲಗತ್ತಿಸಬೇಕು.
ESI Corporation, Kalaburagi’
ಸಂದರ್ಶನದ ಸ್ಥಳ :
ಇಎಸ್ಐಸಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ, ಕಲಬುರಗಿ.
ಅಭ್ಯರ್ಥಿಗಳನ್ನು 1 ವರ್ಷದ ಅವಧಿಗೆ ಗುತ್ತಿಗೆಯ ಆಧಾರದ ಮೇಲೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ವಿವಿಧ ವಿಭಾಗಗಳ ಹುದ್ದೆಗಳಾದ ಅನಾಟಮಿ, ಫಿಸಿಯೋಲಜಿ, ಬಯೋಕೆಮಿಸ್ಟ್ರಿ, ಮೈಕ್ರೋಬಯೋಲಜಿ, ಫಾರೆನ್ಸಿಕ್ ಮೆಡಿಷನ್, ಕಂಮ್ಯುನಿಟಿ ಮೆಡಿಷನ್, ಟಿಬಿ ಮತ್ತು ಚೆಸ್ಟ್, ಐಸಿಯು / ಎಂಐಸಿಯು, ಐಸಿಸಿಯು, ಎಮರ್ಜೆನ್ಸಿ ಮೆಡಿಷನ್, ಒಟ್ಟು 36 ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ವಿದ್ಯಾರ್ಹತೆ :
ಪಿಜಿ ಡಿಗ್ರಿ (ಎಂಡಿ / ಎಂಎಸ್ / ಡಿಎನ್ಬಿ) ಅನ್ನು ಮೇಲೆ ತಿಳಿಸಿದ ವಿಭಾಗಗಳಲ್ಲಿ ಪಡೆದಿರಬೇಕು. ಅರ್ಜಿ ಸಲ್ಲಿಸುವವರು 44 ವರ್ಷ ದಾಟಿರಬಾರದು.
Notification Website Link : https://www.esic.gov.in/
ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ವರ್ಗವರು ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಆರ್ಥಿಕವಾಗಿ ಹಿಂದುಳಿದವರಿಗೆ 7 ಹುದ್ದೆಗಳು, ಇತರೆ ಹಿಂದುಳಿದ ವರ್ಗದವರಿಗೆ 18, ಪರಿಶಿಷ್ಟ ಜಾತಿಗೆ 6 , ಪರಿಶಿಷ್ಟ ಪಂಗಡ ಕ್ಕೆ 5 ಹುದ್ದೆಗಳು ಮೀಸಲಾತಿ ಇವೆ.