ಸುದ್ದಿ

ಮುಂಡವಾಡದಲ್ಲಿ ವ್ಯಕ್ತಿ ಮೇಲೆ ಕರಡಿ ದಾಳಿ

Share It

ಬೆಳಗಾವಿ : ಖಾನಾಪುರ ತಾಲೂಕು ಮುಂಡವಾಡ ಗೌಳಿವಾಡದ ರೈತ ವಿನೋದ ಜಾಧವ (46) ಅವರ ಮೇಲೆ ಇಂದು ಬೆಳಗ್ಗಿನ ಹೊತ್ತು ಅವರು ಜಮೀನಿಗೆ ತೆರಳುತ್ತಿದ್ದ ವೇಳೆ ಎರಡು ಕರಡಿಗಳು ಏಕಾಏಕಿ ದಾಳಿ ನಡೆಸಿದ್ದರಿಂದ ಅವರು ಗಾಯಗೊಂಡಿದ್ದಾರೆ.

ವಿನೋದ ಜಾಧವ ಅವರು ಎಂದಿದಂತೆ ತಮ್ಮ ಜಮೀನಿಗೆ ಹೋಗುತ್ತಿದ್ದರು. ಆ ಸಂದರ್ಭದಲ್ಲಿ ಕರಡಿಗಳು ದಾಳಿ ಮಾಡಿವೆ. ಅವರು ಗಾಯಗೊಂಡ ಮಾಹಿತಿ ಪಡೆದ ಕೂಡಲೇ ಗ್ರಾಮಸ್ಥರು ಶಾಸಕ ವಿಠಲ ಹಲಗೇಕರ, ಅವರ ಆಪ್ತ ರವಿ ಪಾಟೀಲ ಅವರಿಗೆ ವಿಷಯ ಮುಟ್ಟಿಸಿದ್ದಾರೆ.

ರವಿ ಪಾಟೀಲ ಅವರು ಅಂಬುಲೆನ್ಸ್ ಗೆ ಕರೆ ಮಾಡಿ ಸ್ಥಳಕ್ಕೆ ಕಳಿಸಿದ್ದಾರೆ. ಬಳಿಕ ಗ್ರಾಮಸ್ಥರು ಗಾಯಗೊಂಡ ವಿನೋದ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಾಯಗೊಂಡಿರುವ ರೈತರಿಗೆ ಸೂಕ್ತ ಚಿಕಿತ್ಸೆ ಮತ್ತು ಪರಿಹಾರ ದೊರಕಿಸಿಕೊಡಲು ಪ್ರಯತ್ನ ಪ್ರಯತ್ನಿಸುವುದಾಗಿ ಶಾಸಕ ವಿಠಲ ಹಲಗೇಕರ ತಿಳಿಸಿದ್ದಾರೆ.


Share It

You cannot copy content of this page