ಸುದ್ದಿ

ರಾಜ್ಯದ 15 ಜಿಲ್ಲೆಗಳಲ್ಲಿ ಅ.10 ರವರೆಗೂ ಹಿಂಗಾರು ಮಳೆ

Share It

ಬೆಂಗಳೂರು: ರಾಜ್ಯದ ಈ 15 ಜಿಲ್ಲೆಗಳಲ್ಲಿ ಅಕ್ಟೋಬರ್ 10ರವರೆಗೂ ಧಾರಾಕಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಈ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್

ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಮಂಡ್ಯ, ಮೈಸೂರು, ರಾಮನಗರ, ತುಮಕೂರು ಜಿಲ್ಲೆಗಳಲ್ಲಿ ಮಳೆಯಾಗಲಿದ್ದು ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ.

ಇಲ್ಲೆಲ್ಲಾ ನಿನ್ನೆ ಮಳೆ

ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಶಿವಮೊಗ್ಗ, ವಿಜಯನಗರ, ಕೋಲಾರದಲ್ಲಿ ಸಾಧಾರಣ ಮಳೆಯಾಗಿದೆ.

ನಾಪೋಕ್ಲು, ಬಂಡೀಪುರ, ಕಾರ್ಕಳ, ನರಗುಂದ, ರಾಮನಗರ, ಮಸ್ಕಿ, ಕನಕಪುರ, ಮಾಗಡಿ, ಎಚ್​.ಡಿ ಕೋಟೆ, ಮುಂಡಗೋಡು, ಕುಮಟಾ, ಲಕ್ಷ್ಮೇಶ್ವರ, ಕೊಟ್ಟಿಗೆಹಾರ, ಹಾಸನ, ಹೊಸಕೋಟೆ, ಶ್ರವಣಬೆಳಗೊಳ, ಕೋಲಾರ, ತ್ಯಾಗರ್ತಿ, ಪೊನ್ನಂಪೇಟೆ, ಹೊನ್ನಾಳಿ, ಯಲ್ಲಾಪುರ, ಸುಳ್ಯ, ಕಿರವತ್ತಿ, ಉಪ್ಪಿನಂಗಡಿ, ಗಂಗಾವತಿ, ಮೈಸೂರು, ನಾಗಮಂಗಲದಲ್ಲಿ ಸಹ ಮಳೆಯಾಗಿದೆ.


Share It

You cannot copy content of this page