ಹರ್ಯಾಣ ಅಸೆಂಬ್ಲಿ ಎಲೆಕ್ಷನ್: ದೇಶದ ಅತ್ಯಂತ ಶ್ರೀಮಂತೆ ಸಾವಿತ್ರಿ ಜಿಂದಾಲ್ ಶಾಸಕಿಯಾಗಿ ಆಯ್ಕೆ

Share It

ಚಂಡೀಗಢ್; ಬಿಜೆಪಿಯಿಂದ ಟಿಕೆಟ್ ಸಿಗದೇ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ದೇಶದ ಅತ್ಯಂತ ಶ್ರೀಮಂತೆ ಸಾವಿತ್ರಿ ಜಿಂದಾಲ್ ಹರಿಯಾಣದ ಹಿಸ್ಸಾರ್ ಕ್ಷೇತ್ರದಲ್ಲಿ ಭರ್ಜರಿ ಜಯಭೇರಿ ಬಾರಿಸಿದ್ದಾರೆ.

ಪ್ರತಿಸ್ಪರ್ಧಿಗಳಾದ ಬಿಜೆಪಿಯ ಕಮಲ್ ಗುಪ್ತಾ ಮತ್ತು ಕಾಂಗ್ರೆಸ್ ನ ರಾಮ್ ನಿವಾಸ್ ಅವರನ್ನು ಸೋಲಿಸಿದ ಸಾವಿತ್ರಿ ಜಿಂದಾಲ್ 18,941 ಮತಗಳಿಂದ ಗೆಲುವು ದಾಖಲಿಸಿದ್ದಾರೆ.

74 ವರ್ಷದ ಸಾವಿತ್ರಿ ಜಿಂದಾಲ್ 2005ರಲ್ಲಿ ಪತಿ ಓಪಿ ಜಿಂದಾಲ್ ಸಾವಿನ ನಂತರ ರಾಜಕೀಯಕ್ಕೆ ಪ್ರವೇಶಿಸಿದ್ದರು. ಹಿಸ್ಸಾರ್ ವಿಧಾನಸಭಾ ಕ್ಷೇತ್ರದಿಂದ ಇದೀಗ ಮೂರನೇ ಬಾರಿ ಗೆಲುವು ದಾಖಲಿಸಿದ್ದಾರೆ. 2005 ಮತ್ತು 2009ರಲ್ಲಿ ಕಳೆದ ಎರಡು ಬಾರಿ ಕಾಂಗ್ರೆಸ್ ನಿಂದ ಗೆಲುವು ಸಾಧಿಸಿದ್ದರು.

ಕುರುಕ್ಷೇತ್ರ ಸಂಸದ ನವೀನ್ ಜಿಂದಾಲ್ ತಾಯಿ ಸಾವಿತ್ರಿ ಜಿಂದಾಲ್ ಬಿಜೆಪಿ ಟಿಕೆಟ್ ದೊರೆಯದ ಕಾರಣ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ನಿರ್ಧರಿಸಿದ್ದರು.

ಸಾವಿತ್ರಿ ಜಿಂದಾಲ್ 3.25 ಲಕ್ಷ ಕೋಟಿ ಆಸ್ತಿ ಹೊಂದಿದ್ದಾರೆ. ಚುನಾವಣೆಗೆ ಘೋಷಿಸಿದ ಆಸ್ತಿ ವಿವರದಲ್ಲಿ ವೈಯಕ್ತಿಕವಾಗಿ 270 ಕೋಟಿ ರೂ. ಸ್ಥಿರಾಸ್ಥಿ ಹಾಗೂ 80 ಕೋಟಿ ಮೌಲ್ಯದ ಚರಾಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದರು. ದೇಶದ ಅತ್ಯಂತ ಶ್ರೀಮಂತೆ ಹಾಗೂ ಒಟ್ಟಾರೆ ಶ್ರೀಮಂತರ ಪಟ್ಟಿಯಲ್ಲಿ 5ನೇ ಸ್ಥಾನ ಪಡೆದಿದ್ದಾರೆ.


Share It

You May Have Missed

You cannot copy content of this page