ಕ್ರೀಡೆ ಸುದ್ದಿ

ಹಾಂಗ್ ಕಾಂಗ್ ಸಿಕ್ಸಸ್ ಟೂರ್ನಿಯಲ್ಲಿ ಭಾರತದ ಆಟಗಾರರು ಭಾಗಿ!

Share It

ಹೊಸದಿಲ್ಲಿ: ಹಾಂಕಾಂಗ್ ಕ್ರಿಕೆಟ್ ಟೂರ್ನಿಯು ನವಂಬರ್ 1ರಿಂದ 3ರವರೆಗೆ ನಡೆಯಲಿದೆ ಎಂದು ಅಧಿಕೃತವಾಗಿ ಘೋಷಿಸಿದೆ. ಈ ಟೂರ್ನಿಯಲ್ಲಿ ಭಾರತದ ಆಟಗಾರರು ಸಹ ಭಾಗವಹಿಸುತ್ತಾರೆ ಎಂದು ತಿಳಿದು ಬಂದಿದೆ.

ಹಾಂಗ್ ಕಾಂಗ್ ಸಿಕ್ಸಸ್ ಟೂರ್ನಿಯು ಮೊದಲ ಬಾರಿಗೆ 1992ರಲ್ಲಿ ಪ್ರಾರಂಭವಾಯಿತು. ನಂತರ 2012 ಮತ್ತು 2017ರಲ್ಲಿ ಟೂರ್ನಿಯು ನಡೆದಿತ್ತು ನಂತರ ನಡೆದಿಲ್ಲ. ಏಳು ವರ್ಷಗಳ ನಂತರ ಮತ್ತೆ ಟೂರ್ನಿಯನ್ನು ಮಾಡಲು ಹಾಂಗ್ಕಾಂಗ್ ಕ್ರಿಕೆಟ್ ನಿರ್ದರಿಸಿದೆ.

ಹಾಂಗ್ ಕಾಂಗ್ ಸಿಕ್ಸಸ್ ಟೂರ್ನಿಯಲ್ಲಿ 12 ತಂಡಗಳು ಭಾಗವಹಿಸಲಿವೆ ಎಂದು ತಿಳಿದಿದೆ ಅದರಲ್ಲಿ ಭಾರತ, ಆಸ್ಟ್ರೇಲಿಯಾ ಇಂಗ್ಲೆಂಡ್, ಹಾಂಗ್ ಕಾಂಗ್, ಬಾಂಗ್ಲಾದೇಶ, ನ್ಯೂಜಿಲ್ಯಾಂಡ್, ನೇಪಾಳ, ಓಮನ್, ಶ್ರೀಲಂಕಾ, ಯುಎಇ, ದಕ್ಷಿಣ ಆಫ್ರಿಕಾ ತಂಡಗಳಿವೆ.

2017ರಲ್ಲಿ ನಡೆದ ಟೂರ್ನಮೆಂಟ್ ನಲ್ಲಿ ಸಚಿನ್ ತೆಂಡೂಲ್ಕರ್, ಎಂ ಎಸ್ ಧೋನಿ, ಅನಿಲ್ ಕುಂಬ್ಳೆ, ಮ್ಯಾಕ್ಸ್ ವೆಲ್, ಜಯಸೂರ್ಯ, ಮಲಿಕ್ ಲಾರಾ, ಶೇರ್ ವಾರ್ನ್ ಭಾಗವಹಿಸಿದ್ದರು.

ಈ ಟೂರ್ನಮೆಂಟ್ ನಲ್ಲಿ ಪ್ರತಿ ತಂಡದಲ್ಲಿ 6 ಆಟಗಾರರನ್ನು ಒಳಗೊಂಡಿರುತ್ತದೆ. ಒಂದು ಪಂದ್ಯವು 5 ಓವರ್ ಗಳಿಗೆ ಸೀಮಿತವಾಗಿರುತ್ತದೆ. ಪ್ರತಿ ಓವರ್ ಗೆ ಆರು ಎಸೆತಗಳು ಸೀಮಿತವಾಗಿರುತ್ತದೆ ಆದರೆ ಫೈನಲ್ ಪಂದ್ಯಕ್ಕೆ ಓವರ್ ಗೆ ಇಂಟರೆಸ್ಟ್ ಗಳನ್ನು ನೀಡಲಾಗುತ್ತದೆ. ಆರು ಜನ ಆಟಗಾರರಲ್ಲಿ ವಿಕೆಟ್ ಕೀಪರ್ ಹೊರತುಪಡಿಸಿ ಉಳಿದ ಐದು ಜನ ಕೂಡ ಬೌಲಿಂಗ್ ಮಾಡಲೇಬೇಕು. ಒಬ್ಬ ಬ್ಯಾಟ್ಸ್ಮನ್ 31 ರನ್ ಗಳಿಸಿದರೆ ಅವನು ನಿವೃತ್ತ ಹೊಂದಬೇಕು. ಐದು ವಿಕೆಟ್ ಬಿದ್ದಾಗ ನಿವೃತ್ತ ಹೊಂದಿದ ಬ್ಯಾಟರ್ ಮತ್ತೆ ಆಡಲು ಬರಬಹುದು. ಐದು ವಿಕೆಟ್ ಬಿದ್ದ ಸಂದರ್ಭದಲ್ಲಿ ಉಳಿದ ಒಬ್ಬ ಬ್ಯಾಟರ್ ಸ್ಥಳೀಯ ಕ್ರಿಕೆಟ್ನಂತೆ ರನ್ನರ್ ತೆಗೆದುಕೊಂಡು ಆಟ ಮುಂದುವರೆಸಬಹುದು ಬಂದಿರುವ ರನ್ನರ್ ನಾನ್ ಸ್ಟ್ರೈಕರ್ನಲ್ಲೇ ಇರಬೇಕು.


Share It

You cannot copy content of this page