ಬೆಂಗಳೂರು: ಮಾನ ಮರ್ಯಾದಿಗೆ ಅಂಜಿ ತನ್ನ ಕತ್ತನ್ನ ತಾನೇ ಸೀಳಿಕೊಂಡು ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಜಕ್ಕೂರಿನ ಬಳಿ ನಡೆದಿದೆ.
ಮೋಹನ್ ಕುಮಾರ್ (45) ಎಂಬಾತ ಚಾಕುವಿನಿಂದ ತನ್ನ ಕತ್ತನ್ನ ತಾನೇ ಸೀಳಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇತ್ತೀಚಿಗೆ ಮೋಹನ್ ಕುಮಾರ್, ಬಾಮೈದ ವಿವಿ ಪುರಂ ಠಾಣಾ ವ್ಯಾಪ್ತಿಯ ಮನೆಯೊಂದರಲ್ಲಿ ಚಿನ್ನಾಭರಣ ಕಳ್ಳತನ ಮಾಡಿ ಅರೆಸ್ಟ್ ಆಗಿದ್ದ, ಕಳ್ಳತನ ಮಾಡಿದ್ದವ ಇದೇ ಮೋಹನ್ ಕುಮಾರ್ ಮನೇಲಿ ಕದ್ದಿದ್ದ ಚಿನ್ನ ತಂದಿಟ್ಟಿದ್ದ.
ತನಿಖೆ ನಡೆಸಿದ್ದ ವಿವಿ ಪುರಂ ಪೊಲೀಸರು ಮೋಹನ್ ಕುಮಾರ್ ಮನೆಯಲ್ಲಿ ಚಿನ್ನ ವಶ ಪಡೆದು, ವಿಚಾರಣೆಗೆ ಕರೆದಿದ್ದರು. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಅಮೃತಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.