ಹೊಸದಿಲ್ಲಿ : ಬುಧವಾರ ಅರುಣ್ ಜೇಟ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ, ಭಾರತ ಮತ್ತು ಬಾಂಗ್ಲಾದ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಬಾಂಗ್ಲಾ ವಿರುದ್ಧ ಭಾರತ ಬರೋಬ್ಬರಿ 89 ರನ್ ಗಳಿಂದ ಭರ್ಜರಿ ಜಯ ಸಾದಿಸಿದೆ.
ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಬಾಂಗ್ಲಾ ಪವರ್ ಪ್ಲೇನಲ್ಲಿಯೇ ಟೀಮ್ ಇಂಡಿಯಾದ ಇಬ್ಬರು ಆರಂಭಿಕ ಆಟಗಾರರು ಮತ್ತು ನಾಯಕ ಸೂರ್ಯ ಕುಮಾರ್ ಯಾದವ್ ಅವರ ವಿಕೆಟ್ ಕಬಳಿಸಿ ಟೀಮ್ ಇಂಡಿಯಾದ ದಾಂಡಿಗರನ್ನು ಪೆವಿಲಿಯನ್ ಕಡೆ ಮುಖ ಮಾಡುವಂತೆ ಮಾಡಿತು.
ಬಳಿಕ ಕಣಕ್ಕಿಳಿದ ಭಾರತದ ಯುವ ಪ್ರತಿಭೆಗಳಾದ ನಿತೀಶ ಕುಮಾರ್ ರೆಡ್ಡಿ ಮತ್ತು ರಿಂಕು ಸಿಂಗ್ ಬಾಂಗ್ಲಾ ಬೌಲರ್ ಗಳನ್ನು ಮನಬಂದತೆ ದಂಡಿಸಿದರು. ನಿತೀಶ್ ಕುಮಾರ್ ರೆಡ್ಡಿ ತಾನು ಆಡಿದ ಕೇವಲ 34 ಬಾಲ್ ಗಳಲ್ಲಿ 4 ಬೌಂಡರಿ ಮತ್ತು 7 ಸಿಕ್ಸರ್ ಸಹಿತ ಬರೋಬ್ಬರಿ 74 ರನ್ ಭಾರಿಸಿ ಮಿಂಚಿದರು. ಇನ್ನು ರಿಂಕು ಸಿಂಗ್ 29 ಬಾಲ್ ಗಳಲ್ಲಿ 5 ಬೌಂಡರಿ ಮತ್ತು 3 ಸಿಕ್ಸರ್ ಸಹಿತ 53 ರನ್ ಸಿಡಿಸಿದರು.
ನಂತರ ಬ್ಯಾಟಿಂಗ್ ಗೆ ಇಳಿದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ 19 ಬಾಲ್ ಗಳಲ್ಲಿ 32 ರನ್ ಚಚ್ಚಿದರು. ಬಳಿಕ ಯುವ ಆಟಗಾರ ರಿಯಾನ್ ಪರಾಗ್ 6 ಬಾಲ್ ಗಳಲ್ಲಿ 15 ರನ್ ಭಾರಿಸಿದರು. ಒಟ್ಟಾರೆ ಸೀಮಿತ 20 ಓವರ್ ಗಳನ್ನು ಪೂರೈಸಿದ ಟೀಮ್ ಇಂಡಿಯ ತನ್ನ 9 ವಿಕೆಟ್ ಗಳನ್ನು ಕಳೆದುಕೊಂಡು ಬಾಂಗ್ಲಾಕ್ಕೆ 221 ರನ್ ಗಳ ಬೃಹತ್ ಟಾರ್ಗೆಟ್ ಅನ್ನು ನೀಡಿದರು.
ಇನ್ನು ಎರಡನೇ ಇನ್ನಿಂಗ್ಸ್ ನಲ್ಲಿ ಬಾಂಗ್ಲಾ ಪರ ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ಹೊಸಸೈನ್ ಎಮೋನ್ ಮತ್ತು ಲಿಟನ್ ದಾಸ್ ತಾನಂದು ಕೊಂಡತಂತೆ ಉತ್ತಮ ಆರಂಭ ನೀಡಲು ಸಾಧ್ಯವಾಗಲಿಲ್ಲ.
ಬಾಂಗ್ಲಾ ಪರ ಮಹಾಮಾದ್ದುಲ್ಲಾ ರಿಯಾದ್ ರವರ 41 ರನ್ ಬಿಟ್ಟರೆ ಇನ್ನು ಯಾವ ಆಟಗಾರರೂ ಸಹ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಸೀಮಿತ 20 ಓವರ್ ಗಳನ್ನು ಪೂರ್ಣಗೊಳಿಸಿದ ಬಾಂಗ್ಲಾ 9 ವಿಕೆಟ್ ಗಳನ್ನು ಕಳೆದುಕೊಂಡು 135 ರನ್ ಗಳಿಸಿ ಬರೋಬ್ಬರಿ 89 ರನ್ ಗಳ ಬೃಹತ್ ಸೊಲನ್ನು ಅನುಭವಿಸಿತು.
ಟೀಮ್ ಇಂಡಿಯಾದ ಪರ ಬೌಲ್ ಮಾಡಿದ ನಿತೀಶ್ ಕುಮಾರ್ ರೆಡ್ಡಿ ಮತ್ತು ವರುಣ್ ಚಕ್ರವರ್ತಿ ತಲಾ 2 ವಿಕೆಟ್ ಪಡೆದು ಮಿಂಚಿದರು. ಇನ್ನು ಬೌಲಿಂಗ್ ಮಾಡಿದ ಎಲ್ಲಾ ಬೌಲರ್ ಗಳೂ ಸಹ ಒಂದೊಂದು ವಿಕೆಟ್ ಪಡೆದು ಬಾಂಗ್ಲಾ ದೇಶವನ್ನು ಮಣಿಸುವಲ್ಲಿ ಪ್ರಮುಖ ಪಾತ್ರವಸಿದರು. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಉತ್ತಮ ಪ್ರದರ್ಶನ ನೀಡಿದ ಯುವ ಆಟಗಾರ ನಿತೀಶ್ ಕುಮಾರ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.
ಶಿವರಾಜು ವೈ. ಪಿ
ಎಲೆರಾಂಪುರ