ಸುದ್ದಿ

ಟಾಟಾ ಟ್ರಸ್ಟ್ ಎಂ.ಡಿ.ಯಾಗಿ ನೋಯಲ್ ಟಾಟಾ ನೇಮಕ

Share It

ಮುಂಬೈ : ರತನ್ ಟಾಟಾ ನಿಧನದ ಬಳಿಕ ಟಾಟಾ ಗ್ರೂಪ್​ಗೆ ಹೊಸ ವಾರಸುದಾರರ ಆಯ್ಕೆಯಾಗಿದೆ. ಟಾಟಾ ಟ್ರಸ್ಟ್​ಗಳ ಮುಖ್ಯಸ್ಥರಾಗಿ ನೋಯಲ್ ಟಾಟಾ ಅವರನ್ನು ನೇಮಕ ಮಾಡಲಾಗಿದೆ.

ಇಂದು ಶುಕ್ರವಾರ ಟಾಟಾ ಟ್ರಸ್ಟ್​ಗಳ ಮಂಡಳಿ ಸಭೆ ನಡೆದಿದ್ದು, ಅದರಲ್ಲಿ ಒಮ್ಮತದಿಂದ ನೋಯಲ್ ಅವರ ಪರವಾಗಿ ಒಮ್ಮತದ ನಿರ್ಧಾರ ತೆಗೆದುಕೊಳ್ಳಲಾಗಿದೆ. ಟಾಟಾ ಗ್ರೂಪ್​ನ ಮಾಲೀಕ ಸಂಸ್ಥೆಯಾದ ಟಾಟಾ ಸನ್ಸ್​ನಲ್ಲಿ ಟಾಟಾ ಟ್ರಸ್ಟ್​ಗಳು ಬಹುಪಾಲು ಷೇರುದಾರಿಕೆ ಹೊಂದಿವೆ. ಈ ಮೂಲಕ ಟಾಟಾ ಗ್ರೂಪ್​ನ ಒಡೆತನ ನೋಯಲ್ ಟಾಟಾಗೆ ಸಿಗಲಿದೆ.

67 ವರ್ಷದ ನೋಯಲ್ ಟಾಟಾ ಅವರು ರತನ್ ಟಾಟಾ ತಂದೆಯ 2ನೇ ಪತ್ನಿಯ ಮಗ. ಟಾಟಾ ಕುಟುಂಬಕ್ಕೆ ಸೇರಿದ ಸರ್ ದೊರಾಬ್​ಜಿ ಟಾಟಾ ಟ್ರಸ್ಟ್ ಮತ್ತು ಸರ್ ರತನ್ ಟಾಟಾ ಟ್ರಸ್ಟ್​ ಮಂಡಳಿಗಳ ಟ್ರಸ್ಟೀಗಳಲ್ಲಿ ಒಬ್ಬರಾಗಿರುವ ನೋಯಲ್ ಟಾಟಾ ಅವರು ಮುಂದಿನ ವಾರಸುದಾರ ಎಂಬುದು ಬಹುತೇಕ ನಿಶ್ಚಿತವಾಗಿತ್ತು.

87 ವರ್ಷದ ರತನ್ ಟಾಟಾ ಮೊನ್ನೆ ಬುಧವಾರ ಸಂಜೆ ಮುಂಬೈನಲ್ಲಿ ವಿಧಿವಶರಾಗಿದ್ದಾರೆ. ರತನ್ ಅವರ ತಂದೆ ನವಲ್ ಟಾಟಾ ಅವರಿಗೆ ಎರಡು ವಿವಾಹವಾಗಿತ್ತು. ಮೊದಲ ಪತ್ನಿಗೆ ವಿಚ್ಛೇದನ ನೀಡಿ 2ನೇ ಮದುವೆಯಾಗಿದ್ದರು. ರತನ್ ಮತ್ತು ಜಿಮ್ಮಿ ಟಾಟಾ ಅವರು ಮೊದಲ ಪತ್ನಿಯ ಮಕ್ಕಳಾಗಿದ್ದಾರೆ. ನೋಯಲ್ ಟಾಟಾ ಅವರು ಮೊದಲ ಪತ್ನಿಯ ಮಕ್ಕಳಾಗಿದ್ದಾರೆ. ನೋಯಲ್ ಟಾಟಾ ಅವರು 2ನೇ ಪತ್ನಿಯ ಮಗ. ನೋಯಲ್ ಅವರಿಗೆ ಒಂದು ಗಂಡು ಮಗು ಸೇರಿ ಮೂವರು ಮಕ್ಕಳಿದ್ದಾರೆ.

ನೋಯಲ್ ಟಾಟಾ ಅವರು ಬಹಳ ವರ್ಷಗಳಿಂದ ಟಾಟಾ ಗ್ರೂಪ್​ನ ವಿವಿಧ ಬ್ಯುಸಿನೆಸ್​ಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಟೈಟಾನ್ ಮತ್ತು ಟಾಟಾ ಸ್ಟೀಲ್ ಸಂಸ್ಥೆಗಳಿಗೆ ವೈಸ್ ಛೇರ್ಮನ್ ಆಗಿದ್ದಾರೆ. ಫ್ಯಾಷನ್ ಉಡುಪುಗಳ ಟ್ರೆಂಟ್ ಸಂಸ್ಥೆಯ ಛೇರ್ಮನ್ ಆಗಿದ್ದಾರೆ. ಎನ್​ಬಿಎಫ್​ಸಿ ಕ್ಷೇತ್ರದ ಟಾಟಾ ಇನ್ವೆಸ್ಟ್​ಮೆಂಟ್ ಕಾರ್ಪೊರೇಶನ್ ಸಂಸ್ಥೆಗೂ ಅವರೇ ಮುಖ್ಯಸ್ಥರಾಗಿದ್ದಾರೆ. ಇನ್ನು ವೋಲ್ಟಾಸ್ ಸಂಸ್ಥೆಯ ಮಂಡಳಿಯಲ್ಲೂ ಅವರು ಸ್ಥಾನ ಹೊಂದಿದ್ದಾರೆ.

2010-11ರಲ್ಲಿ ನೋಯಲ್ ಅವರನ್ನು ಟಾಟಾ ಇಂಟರ್ನ್ಯಾಷನಲ್​ನ ಎಂ.ಡಿಯಾಗಿ ನೇಮಕ ಮಾಡಲಾಗಿತ್ತು. ಆಗಲೇ ಟಾಟಾ ಗ್ರೂಪ್​ಗೆ ಮುಂದಿನ ವಾರಸುದಾರನಾಗಿ ನೋಯಲ್ ಅವರನ್ನು ಬೆಳೆಸಲಾಗುತ್ತಿರಬಹುದು ಎನ್ನುವ ಸುದ್ದಿ ಹಬ್ಬಿತ್ತು. ಅದು ಈಗ ನಿಜವಾಗಿದೆ.

ಟಾಟಾ ಗ್ರೂಪ್​ನ ಬಿಸಿನೆಸ್​ಗೆ ಬರುವ ಮುನ್ನ ನೋಯಲ್ ಅವರು ಬ್ರಿಟನ್​ನ ನೆಸ್ಲೆ ಸಂಸ್ಥೆಯಲ್ಲಿ ಕೆಲಸ ಮಾಡಿದ್ದರು. ಅದಕ್ಕೂ ಮುನ್ನ ಬ್ರಿಟನ್ ಮತ್ತು ಫ್ರಾನ್ಸ್​ನಲ್ಲಿ ಉನ್ನತ ವ್ಯಾಸಂಗ ಮಾಡಿದ್ದರು ನೋಯಲ್.

ಐರ್ಲೆಂಡ್ ದೇಶದ ಪ್ರಜೆಯಾಗಿರುವ ನೋಯಲ್ ಅವರು ಪಲ್ಲೋನ್​ಜಿ ಮಿಸ್ತ್ರಿ ಅವರ ಅಳಿಯನೂ ಹೌದು. ಟಾಟಾ ಸನ್ಸ್ ಸಂಸ್ಥೆಯ ಅತಿದೊಡ್ಡ ಷೇರುದಾರರಾಗಿರುವ ಪಲ್ಲೋನ್​ಜಿ ಅವರ ಮಗಳಾದ ಅಲೂ ಮಿಸ್ತ್ರಿ ಅವರನ್ನು ನೋಯಲ್ ವಿವಾಹವಾಗಿದ್ದಾರೆ. ಇವರಿಗೆ ಲಿಯಾ, ಮಾಯಾ ಮತ್ತು ನೆವಿಲ್ಲೆ ಎಂಬ ಮೂವರು ಮಕ್ಕಳಿದ್ದಾರೆ. ಲಿಯಾ ಮತ್ತು ಮಾಯಾ ಹೆಣ್ಮಕ್ಕಳು.


Share It

You cannot copy content of this page